Select Your Language

Notifications

webdunia
webdunia
webdunia
webdunia

ಬಿಡಿಎ ವಿರುದ್ಧ ರೊಚ್ಚಿಗೆದ್ದ ಅನ್ನದಾತರು

Food donors who are angry
bangalore , ಮಂಗಳವಾರ, 12 ಜುಲೈ 2022 (20:08 IST)
farrmer
ಬೆಂಗಳೂರು :ಪಿಆರ್ ಆರ್ ಯೋಜನೆ ವಿರುದ್ಧ ಅನ್ನದಾತರು ಇಂದು ಸಿಡಿದೆದ್ದಿದರು.ಕಳೆದ 16 ವರ್ಷಗಳಿಂದ ನೆನೆಗುದಿಗೆ ಬಿದ್ದಿರೋ ಪಿಆರ್ ಆರ್ ಪೆರಿಫೆರೆಲ್ ರಿಂಗ್ ರೋಡ್ ಪರಿಹಾರಕ್ಕೆ ಒತ್ತಾಯ ಮಾಡಿದರು.ಭೂ ಸ್ವಾಧೀನ ಮಾಡಿ ಪರಿಹಾರ ನೀಡದೇ ವಿಳಂಬ ಮಾಡ್ತಿರುವ ಯೋಜನೆಯಿಂದ ಬೀದಿಗೆ ಬಿದ್ದ 5 ಸಾವಿರಕ್ಕೂ ಹೆಚ್ಚು ರೈತರ ಕುಟುಂಬಗಳು ಇಂದು ಆಕ್ಷರ ಸಹ ರೊಚ್ಚಿಗೆದ್ದಿದ್ದರು.2007 ರ ಭೂಪರಿಹಾರ ಗೈಡ್ ಲೈನ್ಸ್ ಗೆ ರೈತರು ಭಾರೀ ಆಕ್ರೋಶವೇ ವ್ಯಕ್ತಪಡಿಸಿದಾರೆ.ಸದ್ಯದ SR ವ್ಯಾಲ್ಯೂ ಪ್ರಕಾರ ಭೂ ಪರಿಹಾರಕ್ಕೆ ಆಗ್ರಹ ಮಾಡಿದ್ದಾರೆ.ಬಿಡಿಎ ಕೇಂದ್ರ ಕಛೇರಿಯ ಮುಂದೆ ಜಮಾಯಿಸಿದ ನೂರಾರು ರೈತರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಇನ್ನು ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆಪ್ರತಿಭಟನಾ ನಿರತ ರೈತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಅಷ್ಟೇ ಅಲ್ಲದೇ ಬಿಡಿಎ ಕೇಂದ್ರ ಕಚೇರಿಗೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೇಡಿಕೆಗಳಿಗೆ ಒತ್ತಾಯಿಸಿ ಸಿಎಂ ಭೇಟಿ ಮಾಡಲಿರುವ ಹೊಟೇಲ್ ಮಾಲೀಕರು