ಬೆಂಗಳೂರು: ರಾಜ್ಯದಲ್ಲಿ ಮಂಗನ ಜ್ವರಕ್ಕೆ ಮೊದಲ ಸಾವು ಸಂಭವಿಸಿದ್ದು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ 29 ವರ್ಷದ ಯುವಕ ಚಿಕಿತ್ಸೆ ಪಡೆದು ವೈದ್ಯಕೀಯ ಆರೈಕೆ ನೀಡಿದ್ದರೂ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಇನ್ನೂ ಮೃತ ಯುವಕನಿಗೆ ಆರೋಗ್ಯ ಅಧಿಕಾರಿಗಳು ಮಂಗನ ಕಾಯಿಲೆ ಸೋಂಕನ್ನು ದೃಢಪಡಿಸಿದ್ದಾರೆ ದುರ್ಬಲ ಜಿಲ್ಲೆಗಳಲ್ಲಿ ಕಣ್ಗಾವಲು ಮತ್ತು ತಡೆಗಟ್ಟುವ ಕ್ರಮಗಳನ್ನು ಅಧಿಕಾರಿಗಳು ಹೆಚ್ಚಿಸಿದ್ದಾರೆ.
ಇನ್ನೂ ಈಚೆಹೆ ಶಿವಮೊಗ್ಗ ಮತ್ತು ನೆರೆಯ ಚಿಕ್ಕಮಗಳೂರಿನ ಕೆಲವು ಭಾಗಗಳಲ್ಲಿ ಮಂಗನ ಜ್ವರದ ವಿರಳ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವ ಬೆನ್ನಲ್ಲೇ ಈ ಸಾವು ಸಂಭವಿಸಿದೆ.
ಕರ್ನಾಟಕವು ಬಹುತೇಕ ಪ್ರತಿ ವರ್ಷ ಮಂಗನ ಜ್ವರ ಪ್ರಕರಣಗಳನ್ನು ಕಾಣುತ್ತದೆ. ವಿಶೇಷವಾಗಿ ಮಲೆನಾಡು ಪ್ರದೇಶದ ಅರಣ್ಯ ಮತ್ತು ಅರೆ-ಅರಣ್ಯ ಪ್ರದೇಶಗಳಲ್ಲಿ, ಆಗಾಗ್ಗೆ ವೈರಸ್ ಹರಡುತ್ತದೆ. ಈ ರೋಗವು ಸಾಮಾನ್ಯವಾಗಿ ಜನವರಿ ಮತ್ತು ಮಾರ್ಚ್ ನಡುವೆ ಉತ್ತುಂಗಕ್ಕೇರುತ್ತದೆ. ಸೋಂಕುಗಳು ಮುಂಗಾರು ಆರಂಭದವರೆಗೆ ಮುಂದುವರಿಯಬಹುದು.