Publish Date: Tue, 28 Sep 2021 (20:06 IST)
Updated Date: Tue, 28 Sep 2021 (20:08 IST)
ಚಲಿಸುತ್ತಿದ್ದ ಕಾರೊಂದು ಬೆಂಕಿ ಹೊತ್ತಿ ನಡು ರಸ್ತೆ ದಗದಗಿಸಿದ ಘಟನೆ ಜ್ಞಾನಭಾರತೊ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅದೃಷ್ಟವಶಾತ್ ಕಾರಿನ ಚಾಲಕ ಜೀವ ಅಪಾಯದಿಂದ ಪಾರಾಗಿದ್ದಾನೆ.
ಹೊಂಡಾ ಆಮೇಜ್ ಕಾರು ಬೆಂಕಿ ಹೊತ್ತಿಕೊಂಡು ಕರುಕಲಾಗಿದೆ. ಇದನ್ನು ಚಲಾಯಿಸುತ್ತಿದ್ದ ನಟರಾಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೆÇಲೀಸರು ತಿಳಿಸಿದರು.
ತಮ್ಮ ಸಂಬಂಧಿಕರನ್ನು ನೋಡಲು ನಟರಾಜ್ ತಮ್ಮ ಹೊಂಡಾ ಅಮೇಜ್ ಕಾರಿನಲ್ಲಿ ಹೊರಟಿದ್ದರು. ದೊಡ್ಡಬಸ್ತಿ ಮುಖ್ಯರಸ್ತೆಯಲ್ಲಿ ಕಾರಿನಲ್ಲಿ ಹೊಗೆ ಕಾಣಿಸಿಕೊಂಡು ಬೆಂಕಿ ಉರಿಯಲಾರಂಭಿಸಿತ್ತು. ಗಾಬರಿಗೊಂಡ ನಟರಾಜ್, ಕಾರನ್ನು ರಸ್ತೆಯಲ್ಲೇ ನಿಲ್ಲಿಸಿ ಇಳಿದಿದ್ದರು ಎಂದು ಹೇಳಿದರು.
ಸ್ಥಳಕ್ಕೆ ಹೋಗಿದ್ದ ಗಸ್ತು ಸಿಬ್ಬಂದಿ, ಕಾರಿನ ಬಳಿ ಸಾರ್ವಜನಿಕರ ಓಡಾಟವನ್ನು ನಿರ್ಬಂಧಿಸಿದ್ದರು. ನಾಗರಬಾವಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರಿಗೆ ತಗುಲಿದ್ದ ಬೆಂಕಿ ನಂದಿಸಿದರು. ಅಷ್ಟರಲ್ಲೇ ಕಾರು ಸಂಪೂರ್ಣ ಸುಟ್ಟಿ ಹೋಗಿತ್ತು ಎಂದು ತಿಳಿದುಬಂದಿದೆ. ಈ ಸಂಬಂಧ ಜ್ಞಾನಭಾರತಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಹಿದ್ದು ಕಾರಿಗೆ ಬೆಂಕಿ ಹೊತ್ತಿಕೊಳ್ಳಲು ಕಾರಣವೇನು ಎಂಬುದು ಗೊತ್ತಾಗಿಲ್ಲ. ತನಿಖೆ ಮುಂದುವರಿದಿದೆ ಎಂದು ಪೆÇಲೀಸರು ತಿಳಿಸಿದರು.