Publish Date: Fri, 01 Mar 2019 (16:18 IST)
Updated Date: Fri, 01 Mar 2019 (17:05 IST)
ಪ್ರೀತ್ಸೆ ಪ್ರೀತ್ಸೆ ಅಂತ ಬೆನ್ನು ಬಿದ್ದಿದ್ದ ಪಾಗಲ್ ಪ್ರೇಮಿಯೊಬ್ಬ ಪ್ರೀತಿ ನಿರಾಕರಿಸಿದವಳಿಗೆ ಬೆಂಕಿ ಇಟ್ಟಿದ್ದಾನೆ. ಕಾಲೇಜಿನಲ್ಲಿಯೇ ಯುವತಿಯೊಬ್ಬಳಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ.
ಆಂಧ್ರಪ್ರದೇಶದ ಸಂಗೇಮ್ ಮಂದಲ್ ಎಂಬಲ್ಲಿ ಈ ಘಟನೆ ನಡೆದಿದೆ.
ಅನ್ವೇಷ್ ಸ್ನೇಹಿತೆಗೆ ಬೆಂಕಿದ ಆರೋಪಿಯಾಗಿದ್ದಾನೆ. ಅಂತಿಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿರುವ ಅನ್ವೇಷ್, ರವೇಲಿ ಎಂಬಾಕೆಯನ್ನು ಪ್ರೀತಿ ಮಾಡುತ್ತಿದ್ದನು. ನಾನು ನಿನ್ನೇ ಪ್ರೀತಿಸುವೆ ಎಂದು ರವೇಲಿ ಬಳಿ ತನ್ನ ಪ್ರೇಮ ನಿವೇದನೆ ಮಾಡಿದ್ದಾನೆ. ಆದರೆ ಯುವತಿ ರವೇಲಿ ಪ್ರೀತಿಯನ್ನು ನಿರಾಕರಣೆ ಮಾಡಿದ್ದಾಳೆ. ರವೇಲಿ ಪ್ರೀತಿಗೆ ನೋ ಎಂದಿದ್ದೇ ತಡ ಇದರಿಂದ ಕೋಪಗೊಂಡ ಅನ್ವೇಷ್ ಆಕೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಘಟನೆಯಲ್ಲಿ ಯುವತಿಯ ದೇಹ ಶೇ.80 ರಷ್ಟು ಸುಟ್ಟಿದೆ ಎಂದು ಡಾಕ್ಟರ್ ತಿಳಿಸಿದ್ದಾರೆ. ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.