Publish Date: Sat, 14 Sep 2019 (19:33 IST)
Updated Date: Sat, 14 Sep 2019 (19:36 IST)
ತಿರುಪತಿ ದರ್ಶನ ಮಾಡಿಕೊಂಡು ವಾಪಸ್ ಬರುತ್ತಿದ್ದಾಗ ಕಾರೊಂದು ಪಲ್ಟಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಒಂದೇ ಮನೆಯ ಐವರು ಬೆಂಕಿಯಲ್ಲಿ ಬೆಂದು ಸಾವನ್ನಪ್ಪಿದ್ದಾರೆ.
ಚಿತ್ತೂರು ಹತ್ತಿರದ ಮಾಮಡಗು ಎಂಬಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ ಒಬ್ಬರು ಮಾತ್ರ ಪಾರಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಜಾನ್ಹವಿ, ಕಲಾ, ಪವನ್, ಸಾಯಿ, ಆಶ್ರೀತಾ ಸಾವನ್ನಪ್ಪಿದವರಾಗಿದ್ದು, ಇವರು ಬೆಂಗಳೂರಿನ ನಿವಾಸಿಗಳು.
ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಪಲ್ಟಿ ಹೊಡೆದಿದ್ದು, ಈ ರಭಸಕ್ಕೆ ಕಾರಿಗೆ ಬೆಂಕಿ ಹೊತ್ತಿಕೊಂಡು ದುರ್ಘಟನೆ ಸಂಭವಿಸಿದೆ.