ಬೆಂಕಿ ತಗುಲಿ 40ಕ್ಕೂ ಹೆಚ್ಚು ಚೀಲ ಸಜ್ಜೆ ಭಸ್ಮ, ಕಣ್ಣೀರಿಟ್ಟ ರೈತ ಕುಟುಂಬ..!

Webdunia
ಸೋಮವಾರ, 12 ನವೆಂಬರ್ 2018 (19:23 IST)
ಸಜ್ಜೆ ಗೂಡಿಗೆ ಬೆಂಕಿ ತಗುಲಿ 40ಕ್ಕೂ ಹೆಚ್ಚು ಚೀಲ ಸಜ್ಜೆ ಭಸ್ಮವಾಗಿದ್ದು, ರೈತ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ರಾಂಪೂರ ಗ್ರಾಮದಲ್ಲಿ ಸಜ್ಜೆ ಗೂಡಿಗೆ ಬೆಂಕಿ ತಗುಲಿ 40ಕ್ಕೂ ಹೆಚ್ಚು ಚೀಲ ಸಜ್ಜೆ ಭಸ್ಮವಾಗಿದ್ದು, ರೈತ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ದೇವಮ್ಮ ಗಂಡ ಭೀಮಶೆಪ್ಪ ಎಂಬುವವರಿಗೆ ಸೇರಿದ ಸಜ್ಜೆ ಗೂಡಿಗೆ ರಾತ್ರಿ ಬೆಂಕಿ ತಗುಲಿದ್ದು, ಬೆಂಕಿಯಲ್ಲಿ ಸಜ್ಜೆ ಗೂಡು ಸಂಪೂರ್ಣವಾಗಿ ಭಸ್ಮವಾಗಿದೆ.

ಸಜ್ಜೆ ಗೂಡಿಗೆ ಬೆಂಕಿ ತಗುಲಿದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ರೈತ ಕುಟುಂಬ ಕಣ್ಣೀರಿಟ್ಟಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂದು ದುಃಖ ವ್ಯಕ್ತಪಡಿಸಿದೆ.

ಆಕಸ್ಮಿಕವೋ, ಯಾರೋ ಉದ್ದೇಶ ಪೂರ್ವಕವಾಗಿ ಬೆಂಕಿ‌ ಹಚ್ಚಿದ್ದಾರೋ ಗೋತ್ತಿಲ್ಲ. ನಾವು ಸಜ್ಜೆ ತನೆಗಳನ್ನು ಮುರಿದು ಗುಂಪು ಹಾಕಿ ಸಜ್ಜೆ ರಾಶಿ ಮಾಡಲು‌ ಮುಂದಾಗಿದ್ದೇವು.  ರಾತ್ರೋ ರಾತ್ರಿ ಎರಡು ಸಜ್ಜೆ ಗೂಡಿನ‌ ತೆನೆಗಳು ಸುಟ್ಟಿದ್ದು ಅಪಾರ ನಷ್ಟವಾಗಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಸಂಬಂಧಿಸಿದ ಇಲಾಖೆಯವರು ರೈತ ಕುಟುಂಬಕ್ಕೆ ನೆರವಾಗುವ ಕೆಲಸ ಮಾಡುವುದೋ ಕಾದು ನೋಡಬೇಕಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವೇಣುಗೋಪಾಲ್ ರಾಜ್ಯದ ಸೂಪರ್ ಸಿಎಂ: ಎನ್ ರವಿಕುಮಾರ್

ಕೋಗಿಲು ಬಡಾವಣೆ ಅಕ್ರಮ ಮನೆಗಳ ತೆರವು; ಸಿಎಂ, ಡಿಸಿಎಂ ಯೂ ಟರ್ನ್: ವಿಜಯೇಂದ್ರ

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಈ ಎದೆ ಝಲ್ಲೆನಿಸುವ ಆಕ್ಸಿಡೆಂಟ್ ವಿಡಿಯೋ

ಮನೆ ಕೋರಿ ಕರ್ನಾಟಕದ ಅರ್ಜಿ ಸಲ್ಲಿಸಿದವರ ಗತಿ ಏನು: ಶೋಭಾ ಕರಂದ್ಲಾಜೆ

ರಾಹುಲ್ ಗಾಂಧಿಗಿಂತ ಮೊದಲು ನೆಹರೂ ಕುಟುಂಬದಲ್ಲಿ ನಡೆಯುತ್ತಿದೆ ಮದುವೆ: ಯಾರದ್ದು ನೋಡಿ

ಮುಂದಿನ ಸುದ್ದಿ
Show comments