Webdunia - Bharat's app for daily news and videos

Install App

ಅತ್ಯಚಾರ ಮಾಡಿ ವಿಡಿಯೋ, ಬೆದರಿಸಿ ಹಣ ವಸೂಲಿ ನಟನ ವಿರುದ್ಧ FIR

Webdunia
ಶನಿವಾರ, 12 ಆಗಸ್ಟ್ 2023 (19:42 IST)
ಸ್ಯಾಂಡಲ್ ವುಡ್ ನಲ್ಲಿ ಸ್ವಯಂಕೃಷಿ ಹೆಸರಿನ ಚಿತ್ರ ನಿರ್ಮಾಣ ಮಾಡಿ, ನಟಿಸಿದ್ದ ವೀರೇಂದ್ರ ಬಾಬು ಎಂಬಾತನನ್ನ ಮಹಿಳೆಯೊಬ್ಬರ ಮೇಲೆ ಅತ್ಯಾಚಾರಗೈದು, ಹಣ ವಸೂಲಿ ಮಾಡಿರುವ ಆರೋಪದಡಿ ಕೊಡಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ‌. ಪ್ರಜ್ಞೆ ತಪ್ಪಿಸಿ ಅತ್ಯಾಚಾರಗೈದು, ಅದನ್ನ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದಾರೆ ಹಾಗೂ 15 ಲಕ್ಷ ರೂ ಹಣ ಪೀಕಿದ್ದಾರೆ ಎಂದು 36 ವರ್ಷದ ಮಹಿಳೆಯೊಬ್ಬರು ನೀಡಿದ್ದ ದೂರಿನನ್ವಯ ಕೊಡಿಗೆಹಳ್ಳಿ ಠಾಣಾ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.
 
ದೂರುದಾರ ಮಹಿಳೆ 2021ರ ನವೆಂಬರ್‌ನಲ್ಲಿ ಕೆಲಸವೊಂದರ ನಿಮಿತ್ತ ವೀರೇಂದ್ರ ಬಾಬುನನ್ನ ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ಕಾಫಿಯಲ್ಲಿ ಮತ್ತು ಬರುವ ಔಷಧಿ ಸೇರಿಸಿ ಕುಡಿಸಿ ಅತ್ಯಾಚಾರಗೈದಿದ್ದ ವೀರೇಂದ್ರ ಬಾಬು, ಅದನ್ನ ವೀಡಿಯೋ ಚಿತ್ರೀಕರಣ ಮಾಡಿಕೊಂಡಿದ್ದ. ಬಳಿಕ ಆ ವೀಡಿಯೋವನ್ನ ವೈರಲ್ ಮಾಡುವುದಾಗಿ ಬೆದರಿಸಿ ಹದಿನೈದು ಲಕ್ಷ ರೂ ಹಣ ದೋಚಿದ್ದ. ಅಂದು ಒಡವೆಗಳನ್ನ ಮಾರಿ ಹಣ ನೀಡಿದ್ದ ದೂರುದಾರ ಮಹಿಳೆ ತನ್ನ ಘನತೆಗೆ ಧಕ್ಕೆ ಬರಬಾರದು ಎಂದು ಸುಮ್ಮನಾಗಿದ್ದಳು.ಆದರೆ ಜುಲೈ 30ರಂದು ದೂರುದಾರಳಿಗೆ ಬೆದರಿಸಿದ್ದ ವೀರೇಂದ್ರ ಬಾಬು ಆಕೆಯನ್ನ ಪುನಃ ತನ್ನ ಬಳಿ ಕರೆಯಿಸಿಕೊಂಡಿದ್ದ. ಬಳಿಕ ತನ್ನ ಸ್ನೇಹಿತರಾದ ನಿರಂಜನ್ ರಾವ್, ಬಸವರಾಜ್, ಶಿವಕುಮಾರ್, ದೀಕ್ಷಿತ್ ನೆರವಿನಿಂದ ದೂರುದಾರಳನ್ನ ತನ್ನ ಕಾರಿನಲ್ಲಿ ಕೂರಿಸಿಕೊಂಡು ಬೇರೆ ಬೇರೆಡೆ ಸುತ್ತಾಡಿಸಿ ಮೈಮೇಲಿದ್ದ ಚಿನ್ನಾಭರಣ ಕಿತ್ತುಕೊಂಡಿದ್ದಾನೆ. ಪಿಸ್ತೂಲ್ ತಲೆಗೆ ಇಟ್ಟು ಬೆದರಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಸದ್ಯ ಸಂತ್ರಸ್ತ ಮಹಿಳೆ ನೀಡಿರುವ ದೂರಿನ ಮೇರೆಗೆ ವೀರೇಂದ್ರ ಬಾಬು,ನಿರಂಜನ್ ರಾವ್ , ಬಸವರಾಜ್, ಶಿವಕುಮಾರ್ ಹಾಗೂ ದೀಕ್ಷಿತ್ ಎಂಬುವವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದು ಸದ್ಯ ವೀರೇಂದ್ರ ಬಾಬುನನ್ನ ಬಂಧಿಸಿ ತನಿಖೆ ಮುಂದುವರೆಸಲಾಗಿದೆ ಎಂದು ಕೊಡಿಗೆಹಳ್ಳಿ ಪೊಲೀಸರು ತಿಳಿಸಿದ್ದಾರೆ‌.
 
ಈ ಹಿಂದೆ ಕಳೆದ ವರ್ಷ ಜುಲೈನಲ್ಲಿ ಚುನಾವಣೆಯಲ್ಲಿ ಟಿಕೆಟ್​ ಕೊಡಿಸುವುದಾಗಿ 1 ಕೋಟಿ 88 ಲಕ್ಷ ರೂ ಹಣ ಪಡೆದು ವಂಚಿಸಿದ ಆರೋಪದಡಿ ವೀರೇಂದ್ರ ಬಾಬುನನ್ನ ಬಂಧಿಸಲಾಗಿತ್ತು.ಬಾಬು ವಿರುದ್ಧ ಬಸವರಾಜ ಘೋಷಾಲ್ ಎಂಬುವರು ನೀಡಿದ ದೂರಿನನ್ವಯ ಕೊಡಿಗೆಹಳ್ಳಿ ಠಾಣಾ ಪೊಲೀಸರು ಆತನನ್ನ ಬಂಧಿಸಿದ್ದಾರು.ಇನ್ನೂ ನಟನ ಎಷ್ಟು ಅವತಾರಗಳಿವೆಯೋ ಕಾದು ನೋಡಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments