Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಉಗುಳಿದರೆ ಬೀಳುತ್ತೆ ದಂಡ!

ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಉಗುಳಿದರೆ ಬೀಳುತ್ತೆ ದಂಡ!
bengaluru , ಶುಕ್ರವಾರ, 6 ಆಗಸ್ಟ್ 2021 (21:18 IST)
, ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವುದನ್ನು ನಿಷೇಧಿಸುವ ಬರಹವಿರುವ  ಅಭಿಯಾನದ ವಾಹನಕ್ಕೆ  ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಇಂದು ಚಾಲನೆ ನೀಡಲಾಯಿತು.
ಎಲ್ಲೆoದರಲ್ಲಿ ಉಗುಳು ವುದರಿಂದ ಸಾಂಕ್ರಾಮಿಕ ರೋಗಗಳು ಹರುಡುವುದಲ್ಲದೆ, ಶುಚಿತ್ವಕೂ ಭಂಗ ಉಂಟಾಗಿ ಜನಸಾಮಾನ್ಯರಿಗೆ ಅನಾನುಕೂಲವಾಗುತ್ತದೆ.
ನಿಗಮದ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ದಂಡ ವಿಧಿಸುವ ಕ್ರಮ ಜೂನ್ 2020 ರಿಂದ ಜಾರಿಗೆ ತರಲಾಗಿರುತ್ತದೆ.
ಜನ ಸಾಮಾನ್ಯರಿಗೆ ಈ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬ್ಯುಟಿಫುಲ್ ಬೆಂಗಳೂರು ಹಾಗೂ ಸಾರಾ ಜಹಾನ್ ಸೆ ಅಚ್ಚಾ ಫುಣೆ ತಂಡಗಳು "ಉಗುಳುವ ನಿಷೇಧದ ಅಭಿಯಾನ" ನಿಗಮದೊಂದಿಗೆ ಸೇರಿ ಹಮ್ಮಿಕೊಂಡಿರುತ್ತಾರೆ.
ಕೊರಿನಾ ಮಹಾಮಾರಿಯು ಪ್ರಪಂಚವನ್ನೇ ತಲ್ಲಣಕ್ಕೆ ಗುರಿಮಾಡಿರುವ ಸಂದರ್ಭದಲ್ಲಿ ಇಂತಹ ಅಭಿಯಾನವನ್ನು ನಾವೆಲ್ಲರೂ ಪ್ರೋತ್ಸಾಹಿಸಬೇಕಾಗಿದೆ. ಹಾಗೂ ಈ ಸಂದೇಶವನ್ನು ಎಲ್ಲಾ ಕಡೆಗೂ ಸಾರಬೇಕೆಂದು ಕೆ ಎಸ್ ಆರ್ ಟಿ ಸಿ ಕೆಂಪೇಗೌಡ ಬಸ್ ನಿಲ್ದಾಣದ ವಿಭಾಗೀಯ ನಿಯಂತ್ರಣಾಧಿಕಾರಿಯಾಗಿರುವ.  ಎಸ್.ಆರ್. ಚಂದ್ರಶೇಖರ್   ರವರು ಮನವಿ ಮಾಡಿರುತ್ತಾರೆ.
ನಿಗಮದ ಪರಿಸರ ಅಧಿಕಾರಿ ಶ್ರೀ ಸತೀಶ್, ಬ್ಯುಟಿಫುಲ್ ಬೆಂಗಳೂರು ತಂಡದ ಸಂಸ್ಥಾಪಕ ಒಡೆಟ್ ಕಾತರಕ್ ಹಾಗೂ ಸಾರಾ ಜಹಾ ಸೆ ಅಚ್ಚಾ ಸಂಸ್ಥಾಪಕ ನಿರ್ದೇಶಕರಾದ ರಾಜಾ ನರಸಿಂಹನ್ ಹಾಗೂ ಪ್ರೀತಿ ರಾಜಾ ಮತ್ತು ರೋಟರಿ ಕ್ಲಬ್ ವತಿಯಿಂದ ಪ್ರಭು ಕಾಶೀನಾಥ್ ನೆರೆದಿರುವ ಜನರಿಗೆ ಜಾಗೃತಿ ಮೂಡಿಸಿದರು. ನಟ ಪುನೀತ್ ರಾಜಕುಮಾರ್ ಅವರ ವಿಡಿಯೋ ಸಂದೇಶವನ್ನು ಪ್ರದರ್ಶಿಸಲಾಯಿತು.
ಪ್ರತಿಜ್ಞೆ ವಿಧಿಯನ್ನು ಬಿ ಬಿ ಎಂ ಪಿ ಮಾರ್ಷಲ್ ಗಳಿಂದ ಬೋಧಿಸಲಾಯಿತು. ನಿಗಮದ ಬಸ್ ನಿಲ್ದಾಣಗಳು, ಘಟಕ, ಕಾರ್ಯಾಗಾರ ಮತ್ತು ಕಛೇರಿಯ ಪ್ರದೇಶಗಳಲ್ಲಿ ಉಗುಳುವವರಿಗೆ ರೂ.100 ದಂಡವನ್ನು ವಿಧಿಸಲಾಗುತ್ತಿದೆ. ಅದರಂತೆ ಜೂನ್ 2020 ರಿಂದ ಮಾರ್ಚ್ 2021 ರವರೆಗೆ ರೂ. 4,66,500 ದಂಡ ಹಾಗೂ ಏಪ್ರಿಲ್ 2021 ರಿಂದ ಜೂನ್ 2021 ರವರೆಗೆ ರೂ.17100 ರೂ ದಂಡ ವಿಧಿಸಲಾಗಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಮಳೆಯ ಪ್ರಮಾಣ ಮತ್ತೆ ಏರಿಕೆ