Select Your Language

Notifications

webdunia
webdunia
webdunia
webdunia

ಆರ್ಟ್ ಆಫ್ ಲೀವಿಂಗ್ ನಿಂದ ಅತಿಕ್ರಮಣ?

ಆರ್ಟ್ ಆಫ್ ಲೀವಿಂಗ್ ನಿಂದ ಅತಿಕ್ರಮಣ?
bengaluru , ಶುಕ್ರವಾರ, 6 ಆಗಸ್ಟ್ 2021 (17:48 IST)
ರವಿಶಂಕರ್ ಗುರೂಜಿ ನೇತೃತ್ವದಲ್ಲಿ ಸರ್ಕಾರಿ ಜಮೀನಗಳನ್ನು ರೈತರ ಜಮೀನಗಳನ್ನು ಅತಿಕ್ರಮಣ ಮಾಡಿರುವುದಲ್ಲದೆ ರಾಜಕಾಲುವೆಯ ದಾಖಲೆಗಳನ್ನು ತಿದ್ದಿ ಆ ಜಾಗದಲ್ಲಿ ಅವರ ಒಡೆತನದ ಸೌಧಾಮಿನಿ ಅಪಾರ್ಟ್ ಮೆಂಟ್ ಕಟ್ಟಿಕೊಂಡಿದ್ದಾರೆ. ಇಷ್ಟಲ್ಲದೆ ಕೆರಗಳನ್ನು ಒತ್ತುವರಿ ಮಾಡಿಕೊಂಡಿರುವುದರ ಬಗ್ಗೆ ದಾಖಲೆಗಳಿವೆ. ರೈತರ ಜಮೀನಗಳನ್ನು ಕಬಳಿಸಿ ರೈತರಿಗೆ ವಂಚನೆ ಮಾಡಿದ್ದಾರೆ. ಇದನ್ನು ಪ್ರಶ್ನಿಸಲು ಹೋದ ರೈತರ ಮೇಲೆ ದೌರ್ಜನ್ಯ ಎಸಗಿರುವುದರ ವಿರುದ್ದ ವಿ ವಿರೇಶ್ ಆಕ್ರೋಶ ವ್ಯಕಪಡಿಸಿದರು.
 ಹೋರಾಟ ಮಾಡಲು ಅನುಮತಿ ಕೇಳಿ ಅಧಿಕಾರಿಗಳಿಗೆ ಮನವಿ ಕೊಟ್ಟಿದ್ದು ಕರೋನಾ ವಿಚಾರದಿಂದ ಕೆಲ ದಿನಗಳು ಹೋರಾಟಕ್ಕೆ ಅವಕಾಶವಿಲ್ಲ, ಕಾನೂನು ಹೋರಾಟ ಮಾಡಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರವಿಶಂಕರ್ ಗುರೂಜಿ ಆಶ್ರಮದ ನಡೆದಿರುವು ಇನ್ನೂ ಹಲವು ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಕರುನಾಡ ಸುವರ್ಣ ವೇದಿಕೆ ರಾಜ್ಯಾಧ್ಯಕ್ಷರಾದ ವಿ.ವೀರೇಶ್ ಎಚ್ಚರಿಕೆ ನೀಡಿದರು.
ಅತಿಕ್ರಮದ ವಿರುದ್ದ  ಹೋರಾಟಕ್ಕೆ ರೈತರು ಗ್ರಾಮಸ್ಥರು ದಲಿತ ಪರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಇನ್ನೂ ಈ ಸುದ್ದಿಗೋಷ್ಠಿಯಲ್ಲಿ ಎ.ಗೋಪಾಲ್ ದಲಿತ ಸಂಘರ್ಷ ಸೇನೆ ರಾಜ್ಯಾಧ್ಯಕ್ಷರು, ಚೇತನ್ ಕುಮಾರ್  ಬಹುಜನ ಭಾಗ್ಯ ವಿಧಾತ ವೇದಿಕೆ ರಾಜ್ಯಾಧ್ಯಕ್ಷರು, ದಲಿತ ಅರುಣ್ ಹಾಗೂ ದಲಿತ ರಮೇಶ್. ಸ್ಥಳೀಯರು ರೈತರಾದ ತಿಮ್ಮಯ್ಯ, ವಕೀಲರಾದ ವಿಜಯ್ ಕುಮಾರ್ , ಗ್ರಾಮ ಪಂಚಾಯಿತಿ ಸದಸ್ಯರಾದ ಚಿನ್ನ ಸ್ವಾಮಿ ಹಾಜರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಶಾಲೆ ಆರಂಭ ಮಾಡುವುದಾಗಿ ಎಡವಟ್ಟಿಗೆ ಸಿಲುಕಿದ ಸರ್ಕಾರ!