Publish Date: Mon, 02 Jul 2018 (17:58 IST)
Updated Date: Mon, 02 Jul 2018 (18:09 IST)
ಕೇಂದ್ರ ಸರಕಾರ ನೋಟ್ ಅಮಾನ್ಯಗೊಳಿಸಿ ವರುಷಗಳೇ ಕಳೆಯುತ್ತ ಬರುತ್ತಿವೆ. ಆದರೆ ಈಗಲೂ ಹಳೆಯ 500 ಮತ್ತು 1000 ಮುಖಬೆಲೆಯ ನೋಟುಗಳು ಅಲ್ಲಲ್ಲಿ ಕಾಣಿಸಿಕೊಂಡು ಸುದ್ದಿ ಮಾಡುತ್ತಿವೆ.
ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಚರಂಡಿಯಲ್ಲಿ ಹಳೆಯ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳು ಪತ್ತೆಯಾಗಿವೆ. ಸವದತ್ತಿಯ ಬೆಣ್ಣಿಕಟ್ಟಿ ಓಣಿಯ ಚರಂಡಿಯಲ್ಲಿ ಅಮಾನ್ಯಗೊಂಡ ನೋಟುಗಳು ಕಾಣಿಸಿಕೊಂಡಿವೆ. ಅರ್ಧ ಸುಟ್ಟ ಸ್ಥಿತಿಯಲ್ಲಿ ನೋಟುಗಳು ಜನರ ಕಣ್ಣಿಗೆ ಬಿದ್ದಿವೆ.
ಸ್ಥಳೀಯರ ಅಂದಾಜಿನ ಪ್ರಕಾರ ನಾಲ್ಕರಿಂದ ಐದು ಲಕ್ಷ ಮೌಲ್ಯದವರೆಗಿನ ಹಳೆಯ ನೋಟುಗಳು ಚರಂಡಿ ನೀರಿನಲ್ಲಿ ಹರಿದು ಹೋಗಿವೆ. ಆದರೆ ಅವುಗಳಲ್ಲಿ ಕೆಲವು ನೋಟುಗಳು ಮಾತ್ರ ಸುಟ್ಟ ಸ್ಥಿತಿಯಲ್ಲಿ ಕಾಣಿಸಿಕೊಂಡಿವೆ ಎನ್ನಲಾಗುತ್ತಿದೆ. ಸವದತ್ತಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.