ಕೊನೆಗೂ ಸೆರೆಸಿಕ್ಕ ಸುಲಿಗೆಕೋರರು

Webdunia
ಮಂಗಳವಾರ, 9 ಅಕ್ಟೋಬರ್ 2018 (15:28 IST)
ರಾತ್ರಿ ವೇಳೆ ಲಾರಿ ಅಡ್ಡಗಟ್ಟಿ ಸುಲಿಗೆ ನಡೆಸುತ್ತಿದ್ದ ಖದೀಮರನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.
ಬೀದರ್ ಜಿಲ್ಲೆಯ ಹುಮನಾಬಾದ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 3 ಜನ ಸುಲಿಗೆಕೋರರ ಬಂಧನ ಮಾಡಿದ್ದಾರೆ.

ಮಲ್ಲುರೆಡ್ಡಿ (23), ಯುನೂಸ್ (25), ಮಹ್ಮದ್ ಜಹಾಂಗೀರ್ (25) ಬಂಧಿತ ಆರೋಪಿಗಳಾಗಿದ್ದಾರೆ. ಹುಮನಾಬಾದ್ ಬೀದರ್ ಮಾರ್ಗದ ಅರಣ್ಯಪ್ರದೇಶದಲ್ಲಿ ಸುಲಿಗೆ ನಡೆಸುತ್ತಿದ್ದರು.

ಬಂಧಿತರಿಂದ 3 ಚಾಕು, ಎರಡು ಮೊಬೈಲ್ ಹಾಗೂ ನಗದು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಕಳೆದ ತಿಂಗಳು ಹುಮನಾಬಾದ್ ತಾಲೂಕಿನ ಕಬೀರಾಬಾದ್ ವಾಡಿ ಬಳಿ ನಡೆದಿದ್ದ ಸುಲಿಗೆ ಪ್ರಕರಣದಲ್ಲಿ
ಹಣಮಂತರೆಡ್ಡಿ ಎಂಬುವರ ಲಾರಿ ಅಡ್ಡಗಟ್ಟಿ ತೋಗರಿ ಬೆಳೆ ಸುಲಿಗೆ ಮಾಡಿದ್ದ ಖದೀಮರು ಇವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಐದುವರೆ ಲಕ್ಷ ರೂ. ಮೌಲ್ಯದ ತೋಗರಿ ಬೆಳೆ ಲಾರಿ ‌ಸಮೇತ ಸುಲಿಗೆ ಮಾಡಿದ್ದರು. ಈ ಕುರಿತು ಹುಮನಾಬಾದ್ ಪೊಲೀಸ್ ಠಾಣಾವ್ಯಾಪ್ತಿ ಪ್ರಕರಣ ದಾಖಲಾಗಿತ್ತು. ಬಂಧಿತ ಆರೋಪಿಗಳು ಮೂರು ವರ್ಷದಿಂದ ಸುಲುಗೆ ನಡೆಸುತ್ತಿದ್ದರು ಎನ್ನಲಾಗಿದೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನ್ಯೂ ಇಯರ್, ಈ ವರ್ಷ ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟದಲ್ಲಿ ಭರ್ಜರಿ ಆದಾಯ

ಕೋಗಿಲು ಪ್ರಕರಣದಲ್ಲಿ ಮನೆ ಕೊಟ್ಟರೆ ನ್ಯಾಯಾಲಯದಲ್ಲಿ ಪ್ರಶ್ನೆ, ರಾಜ್ಯಪಾಲರಿಗೆ ದೂರು: ಎಸ್ ಆರ್ ವಿಶ್ವನಾಥ್

ಭಾರತ, ಪಾಕಿಸ್ತಾನ ವಶದಲ್ಲಿರುವ ಕೈದಿಗಳ, ಮೀನುಗಾರರ ಪಟ್ಟಿ ವಿನಿಮಯ

ಸ್ವಿಟ್ಜರ್ಲೆಂಡ್‌ನ: ಬಾರ್ ಬೆಂಕಿ ಅವಘಡದಲ್ಲಿ 100ಕ್ಕೂ ಅಧಿಕ ಮಂದಿಗೆ ಗಾಯ,‌ ಹೆಚ್ಚುತ್ತಲೇ ಇದೆ

ವರುಣನ ಆಗಮನದೊಂದಿಗೆ ಮೊದಲ ವರ್ಷವನ್ನು ಸ್ವಾಗತಿದ ಮುಂಬೈ

ಮುಂದಿನ ಸುದ್ದಿ
Show comments