Publish Date: Thu, 08 Dec 2022 (21:35 IST)
Updated Date: Thu, 08 Dec 2022 (21:43 IST)
ಪೆಟ್ರೋಲ್ ಬಂಕ್ ಮುಂದೆ ಸರದಿ ಸಾಲಿನಲ್ಲಿ ಬರದೆ ಮಹಿಳೆ ಮೇಲೆ ದರ್ಪ ತೋರಿದ್ದ ಆರೋಪದಡಿ ವ್ಯಕ್ತಿ ವಿರುದ್ಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.ಸ್ವಾತಿ ಎಂಬುವರು ನೀಡಿದ ದೂರಿನ ಮೇರೆಗೆ ಚಂದ್ರಪ್ಪ ವಿರುದ್ಧ ಎಫ್ಐಆರ್ ದಾಖಲಾಗಿದೆ.ಇದೇ ತಿಂಗಳು ಡಿಸೆಂಬರ್ 1 ರಂದು ಹಗದೂರು ಇಂಡಿಯನ್ ಪೆಟ್ರೋಲ್ ಬಂಕ್ ಮುಂದೆ ಪೆಟ್ರೋಲ್ ಹಾಕಿಸಿಕೊಳ್ಳಲು ಚಂದ್ರಪ್ಪ ಎಂಬುವರು ಸರತಿ ಸಾಲಿನಲ್ಲಿ ಇದ್ದಾಗ ಹಿಂಬದಿಯಿಂದ ಬಂದ ಮಹಿಳೆ ಮುಂದೆ ಹೋಗುವುದನ್ನು ಕಂಡು ಗದರಿದ್ದಾನೆ. ಅವಾಚ್ಯ ಶಬ್ಧಗಳಿಂದ ನಿಂದಿಸಿ ದರ್ಪ ತೋರಿದ್ದಾನೆ ಎಂದು ಮಹಿಳೆ ನೀಡಿದ ದೂರಿನ ಮೇರೆಗೆ ವೈಟ್ ಫೀಲ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.