Publish Date: Fri, 09 Dec 2022 (18:55 IST)
Updated Date: Fri, 09 Dec 2022 (18:58 IST)
ಬೇಕರಿ ಹುಡುಗರ ಜೊತೆ ಗಲಾಟೆ ನಡೆದಿದೆ.ನಿನ್ನೆ ತಡರಾತ್ರಿ ಎಚ್ ಎ ಎಲ್ ಕುಂದನಹಳ್ಳಿ ಬಳಿ ಘಟನೆ ನಡೆದಿದ್ದು,ಮಾತಿಗೆ ಮಾತು ಬೆಳೆಸಿ ಪುಂಡರು ಬೇಕರಿಯನ್ನ ಧ್ವಂಸಗೊಳಿಸಿದಾರೆ.ಸಿಗರೇಟ್ ಕೇಳೋ ನೆಪದಲ್ಲಿ ಬಂದು ಗ್ಯಾಂಗ್ ವಾಗ್ವಾದಕ್ಕೆ ಇಳಿದಿದೆ.ಊರ್ ಬಿಟ್ಟು ಊರ್ ಬಂದಿದ್ದೀರಾ, ನಮ್ಗೆ ಆವಾಜಾ ಅಂದಿದ್ದ ಪುಂಡರು ನಂತರ ಸಿಕ್ಕಸಿಕ್ಕ ವಸ್ತುಗಳನ್ನ ಚೆಲ್ಲಾಡಿ ಬೇಕರಿ ಹುಡುಗ್ರಿಗೆ ಥಳಿಸಿದ್ದಾರೆ.ಸದ್ಯ, ಎಚ್ ಎ ಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದೀಗ ಗೂಂಡಾ ವರ್ತನೆ ತೋರಿದ ಪುಂಡರ ಹುಡುಕಾಟದಲ್ಲಿ ಪೊಲೀಸರು ಬ್ಯುಸಿಯಾಗಿದ್ದಾರೆ.