Publish Date: Thu, 13 Oct 2022 (14:48 IST)
Updated Date: Thu, 13 Oct 2022 (14:52 IST)
ಬೆಂಗಳೂರಿನ ಯಲಹಂಕ ತಾಲೂಕಿನ ಹೆಸರಘಟ್ಟದ ಬಸವಣ್ಣ ದೇವಾಲಯದ ಬಳಿ ಘಟನೆ ನಡೆದಿದೆ. ಚಿಕ್ಕ ಮಧುರೆಗೆ ತೆರಳುವ ರಸ್ತೆಯಲ್ಲಿ ಹಳೆಯದಾದ ಬೃಹತ್ ಆಲದಮರ ಬಿದ್ದು ವ್ಯಕ್ತಿಯೊಬ್ಬ ಗಂಭೀರ ಗಾಯಗೊಂಡಿದ್ದಾನೆ. ಇಂದು ಮದ್ಯಾಹ್ನ ಘಟನೆ ನಡೆದಿದ್ದು, ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಕೆಲಸದ ನಿಮಿತ್ತ ವ್ಯಕ್ತಿ ಹೆಸರಘಟ್ಟಕ್ಕೆ ತೆರಳುತ್ತಿದ್ದ ವೇಳೆ ದಿಢೀರ್ ಬೃಹತ್ ಆಲದ ಮರ ಬಿದ್ದಿದೆ. ಮುಖ್ಯ ರಸ್ತೆಯ ಪಕ್ಕದಲ್ಲಿದ್ದ ಬೃಹತ್ ಆಲದಮರ ತುಂಬಾ ಹಳೆಯದ್ದಾದ್ದರಿಂದ ಬಿದ್ದಿದೆ. ಇದರಿಂದ ರಸ್ತೆಯ ಪಕ್ಕದಲ್ಲಿದ್ದ 5ಕ್ಕೂ ಎಲೆಕ್ಟ್ರಿಕ್ ಕಂಬ ಹಾಳಾಗಿವೆ. ಕೂಡಲೇ ಬೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಬಂದು ವಿದ್ಯುತ್ ಕಡಿತಗೊಳಿಸಿದ್ದಾರೆ. ಇನ್ನು ಘಟನೆ ಸಂಬಂಧ ಅರಣ್ಯ ಇಲಾಖೆ ಹಾಗೂ ಬೆಸ್ಕಾಂ ಅಧಿಕಾರಿಗಳು ಮರ ತೆರವುಗೊಳಿಸಿದ್ದಾರೆ.