Publish Date: Mon, 12 Oct 2020 (10:20 IST)
Updated Date: Mon, 12 Oct 2020 (10:22 IST)
ಬೆಂಗಳೂರು : ಹಾಸನ ಜಿಲ್ಲೆಯಲ್ಲಿ ಸಿಎಂ ಆಪ್ತರ ಮಧ್ಯೆ ಮುಸುಕಿನ ಗುದ್ದಾಟ. ಮುಂದಿನ ವಿಧಾನ ಸಭಾ ಚುನಾವಣೆಗೆ ಈಗಿನಿಂದಲೇ ಫೈಟ್.
ಹಾಸನ ಜಿಲ್ಲೆ ಅರಸೀಕೆರೆ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಪ್ತ ಮರಿಸ್ವಾಮಿ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಮಧ್ಯೆ ಫೈಟ್ ನಡೆಯುತ್ತಿದೆ. ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸುತ್ತಿರುವ ಆರೋಪದ ಹಿನ್ನಲೆ ಸಂತೋಷ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. 2 ದಿನದ ಹಿಂದೆ ಗೋಬ್ಯಾಕ್ ಸಂತೋಷ್ ಎಂದು ಪ್ರತಿಭಟನೆ ಕೂಗುತ್ತಿದ್ದಾರೆ ಎನ್ನಲಾಗಿದೆ.
ಅರಸೀಕೆರೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಭ್ಯರ್ಥಿಯಾಗಿ ಜಿವಿಟಿ ಬಸವರಾಜ್ ಹೆಸರನ್ನು ಅಂತಿಮಗೊಳಿಸಲಾಗಿತ್ತು. ಆದರೆ ಆಪ್ತರಿಗೆ ಹುದ್ದೆ ಕೊಡಿಸಲು ಸಂತೋಷ್ ತಂತ್ರಗಾರಿಕೆ ನಡೆಸುತ್ತಿದ್ದಾರೆ ಎಂದು ಸಂತೋಷ್ ವಿರುದ್ದ ಆರೋಪಿಸಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ, ಸಂತೋಷ್ ತಾನೇ ಅರಸೀಕೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಬಂತೆ ಓಡಾಡುತ್ತಿದ್ದಾರೆ ಎಂದು ಸಂತೋಷ್ ನಡೆ ವಿರುದ್ಧ ಕೆಲ ಜಿಲ್ಲೆಯ ಬಿಜೆಪಿ ಮುಖಂಡರು ರಾಜ್ಯ ನಾಯಕರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.