ಮೇವು ಕೊರತೆ ನಿವಾರಣೆಗೆ ಕ್ರಮ ಜರುಗಿಸಿ ಅಗತ್ಯವಿರುವೆಡೆ ಗೋಶಾಲೆ ತೆರೆಯಲು ಸಚಿವ ಆರ್ ವಿ ದೇಶಪಾಂಡೆ ಸೂಚನೆ ನೀಡಿದ್ದಾರೆ. ಗದಗ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಬರ ಪರಿಸ್ಥಿತಿ ಹಾಗೂ ಅದರ ನಿವ೯ಹಣೆಗೆ ಗದಗ ಜಿಲ್ಲಾಡಳಿತ ಹಾಗೂ ಜಿ.ಪಂ. ಕೈಗೊಂಡ ಕ್ರಮಗಳ ಪರಿಶೀಲನಾ ಸಭೆಯಲ್ಲಿ ಸಚಿವರು ಮಾತನಾಡಿದರು.
ಜಿಲ್ಲೆಯು 2016ರಲ್ಲಿ ಒಟ್ಟು ಶೇ. 42 ಮಳೆ ಕೊರತೆಯಾಗಿದೆ. ಹಿಂಗಾರಿನಲ್ಲಿ 72% ಮಳೆ ಕೊರತೆಯಿಂದಾಗಿ 2.53 ಲಕ್ಷ ಹೆಕ್ಟೇರ್ ನಲ್ಲಿ 26,108 ಹೆಕ್ಟೇರ್ ಭೂಮಿ ನೀರಾವರಿ, ಉಳಿದೆಲ್ಲ ಪ್ರದೇಶಗಳ ಬೆಳೆ ತೀವ್ರ ತೇವಾಂಶ ಕೊರತೆಯಿಂದಾಗಿ ಹಾನಿಗೊಳಗಾಗಿದೆ ಎಂದು ಜಿಲ್ಲಾಧಿಕಾರಿ ಪ್ರಸನ್ನಕುಮಾರ್ ಸಮಿತಿಗೆ ಮಾಹಿತಿ ನೀಡಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.