Select Your Language

Notifications

webdunia
webdunia
webdunia
webdunia

ಡ್ರಾಪ್ ನೆಪದಲ್ಲಿ ಕರೆದೊಯ್ದು ಅತ್ಯಾಚಾರ

ಡ್ರಾಪ್ ನೆಪದಲ್ಲಿ ಕರೆದೊಯ್ದು ಅತ್ಯಾಚಾರ
ಬೆಂಗಳೂರು , ಶನಿವಾರ, 17 ಡಿಸೆಂಬರ್ 2016 (09:50 IST)
ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಕಾಲ್‌ಸೆಂಟರ್ ಉದ್ಯೋಗಿಯೊಬ್ಬರರನ್ನು ಹುಳಿಮಾವು ಪೊಲೀಸರು ಬಂಧಿಸಿದ್ದಾರೆ. 
ಆರೋಪಿಯನ್ನು ಫ್ರೇಜರ್ ಟೌನ್‌ನ ಅಮಿತ್ ಸಾಗರ್ (25) ಎಂದು ಗುರುತಿಸಲಾಗಿದ್ದು ಈತ ಬನ್ನೇರುಘಟ್ಟ ರಸ್ತೆಯ ಕಾಲ್ ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾನೆ. 
 
ನಗರದ ಮಾಲ್ ಒಂದರಲ್ಲಿ ಉದ್ಯೋಗಿಯಾಗಿರುವ ಸಂತ್ರಸ್ತೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ ಅಮಿತ್ ಭೇಟಿಯಾಗಿದ್ದಾನೆ. ತಿಂಗಳ ಹಿಂದಷ್ಟೇ ಅವರಿಬ್ಬರಿಗೆ ಪರಿಚಯವಾಗಿತ್ತು. ಮೂರ್ನಾಲ್ಕು ಬಾರಿ ಆತ ಡ್ರಾಪ್ ಕೊಟ್ಟಿದ್ದರಿಂದ ಅದೇ ನಂಬಿಕೆಯ ಮೇಲೆ ಯುವತಿ ಆತನ ಬೈಕ್ ಏರಿದ್ದಾಳೆ. ಆದರೆ ಆಕೆಯ ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡ ಆತ ಅತ್ಯಾಚಾರ ಎಸಗಿದ್ದಾನೆ.
 
ಪ್ರಕರಣ ದಾಖಲಾದ ಬಳಿಕ ಪರಾರಿಯಾಗಿದ್ದ ಆತನನ್ನು ಮೊಬೈಲ್ ಕರೆಗಳ ವಿವರದ ಆಧಾರದ ಮೇಲೆ ಬಂಧಿಸಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕರುಣಾನಿಧಿ ಆರೋಗ್ಯ ಸ್ಥಿರ