Select Your Language

Notifications

webdunia
webdunia
webdunia
webdunia

ರಾಮೇಶ್ವರಂ ಕೆಫೆ ಸ್ಫೋಟದ ಬಗ್ಗೆ ಕೋಡಿಮಠದ ಶಿವಯೋಗಿ ಸ್ವಾಮಿಗಳ ಭವಿಷ್ಯ

 ರಾಮೇಶ್ವರಂ ಕೆಫೆ

geetha

bangalore , ಶನಿವಾರ, 2 ಮಾರ್ಚ್ 2024 (18:02 IST)
ಬೆಂಗಳೂರು : ಜನವರಿಯಲ್ಲಿ ಹೊಸ ವರ್ಷದ ಬಗ್ಗೆ ಭವಿಷ್ಯ ನುಡಿದಿದ್ದ ಕೋಡಿ ಶ್ರೀಗಳು, ಜಾತತಿಕ ಮಟ್ಟದಲ್ಲಿ ಮತಾಂಧತೆ ಹೆಚ್ಚುತ್ತದೆ. ಬಾಂಬ್‌ ಸ್ಫೋಟಗಳು ನಡೆಯಲಿವೆ . ಮತೀಯ ಗಲಭೆಗಳಿಂದ ಜನರು ನೋವು ಅನುಭವಿಸಲಿದ್ದಾರೆ ಎಂದು ಮುನ್ಸೂಚನೆ ನೀಡಿದ್ದರು. 
 
ಶುಕ್ರವಾರ ನಗರದ ರಾಮೇಶ್ವರಂ ಕೆಫೆ ಹೊಟೇಲ್‌ ನಲ್ಲಿ ನಡೆದ ಸ್ಫೋಟದಿಂದಾಗಿ ಹತ್ತು ಮಂದಿ ಗಾಯಗೊಂಡಿದ್ದಾರೆ. ಕೇವಲ ಒಂದು ತಿಂಗಳ ಹಿಂದೆಯಷ್ಟೇ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಗಳು ನುಡಿದಿದ್ದ ಭವಿಷ್ಯ ಪರೋಕ್ಷವಾಗಿ ಈ ಮೂಲಕ ನಿಜವಾಗಿದೆ ಎಂಬ ಮಾತು ಕೇಳಿಬಂದಿದೆ. 

ಇವುಗಳೊಂದಿಗೆ ಬೆಂಕಿ ಅವಘಡಗಳು, ಪ್ರವಾಹ, ಯುದ್ಧಗಳಿಂದಾಗಿ ಸಾವುನೋವುಗಳು ಹೆಚ್ಚಾಗಲಿವೆ. ಜಾಗತಿಕ ಮಟ್ಟದ ನಾಯಕರು ಮರಣ ಹೊಂದಲಿದ್ದಾರೆ.  ಹೊಸವರ್ಷವು ಕ್ರೂರ ರೀತಿಯಲ್ಲಿ ಪರಿಣಾಮ ಬೀರಲಿದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದರು. ಈಗ ಕೋಡಿ ಮಠದ ಸ್ವಾಮಿಗಳ ಕಾಲಜ್ಞಾನವನ್ನು ಪ್ರಸಕ್ತ ಘಟನೆಗೆ ತಾಳೆ ಹಾಕುತ್ತಿರುವ ಜನರು, ಇದು ಭವಿಷ್ಯದ ಘಟನೆಗಳ ಮುನ್ಸೂಚನೆಯಾಗಿದೆ ಎಂದು ಭಾವಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೋ ಸಂಪರ್ಕ..!