Select Your Language

Notifications

webdunia
webdunia
webdunia
webdunia

ರೈತರೇ ಎಚ್ಚೆತ್ತುಕೊಂಡು ಕೂಡಲೇ ಭೂ ದಾಖಲೆ ಪರಿಶೀಲಿಸಿ: ಆರ್‌ ಅಶೋಕ್‌ ಸಲಹೆ

Waqf Board, Nikhil Kumaraswamy, Opposition Leader R Ashok,

Sampriya

ರಾಮನಗರ , ಭಾನುವಾರ, 3 ನವೆಂಬರ್ 2024 (17:55 IST)
ರಾಮನಗರ: ವಕ್ಫ್ ಕಬಂಧ ಬಾಹುಗಳು ಎಲ್ಲೆಡೆ ಚಾಚಿಕೊಳ್ಳುತ್ತಿದ್ದು, ರೈತರು ಎಚ್ಚೆತ್ತುಕೊಂಡು ಕೂಡಲೇ ತಾಲ್ಲೂಕು ಕಚೇರಿಯಲ್ಲಿ ತಮ್ಮ ಭೂ ದಾಖಲೆಗಳನ್ನು ಪರಿಶೀಲನೆ  ಮಾಡಿಕೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಸಲಹೆ ಮಾಡಿದರು.

ಅವರು ಚನ್ನಪಟ್ಟಣ ಕ್ಷೇತ್ರದ ಚಕ್ಕೆರೆ ಗ್ರಾಮದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರದ ಭಾಷಣದಲ್ಲಿ ಹೇಳಿದರು. ಇವತ್ತು ವಕ್ಫ್ ಮಾರಿ ಚನ್ನಪಟ್ಟಣಕ್ಕೂ ವಕ್ಕರಿಸಿದ್ದು, ಯಲಿಯೂರು ಬಳಿ ಹಿಂದೂಗಳ ಸ್ಮಶಾನಕ್ಕೂ ಅದರ ಕಣ್ಣು ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೂರಾರು ವರ್ಷಗಳಿಂದ ರೈತರು ಭೂಮಿಯಲ್ಲಿ ಬಾಳಿ ಬದುಕುತ್ತಿದ್ದಾರೆ. ಆದರೆ, ಇವರು ಖೊಟ್ಟಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಅದಕ್ಕೂ ಹಿಂದಿನಿಂದಲೂ ಈ ಭೂಮಿ ನಮ್ಮ ವಶದಲ್ಲಿ ಇತ್ತು ಎಂದು ತಗಾದೆ ತೆಗೆಯುತ್ತಿದ್ದಾರೆ. ‌

ವಕ್ಫ್ ಎಷ್ಟರ ಮಟ್ಟಿಗೆ ಭೂಮಿಯನ್ನು ಹೊಂದಿದೆ ಎಂದರೆ ಭಾರತೀಯ ಸೇನೆಗಿಂತ ಜಾಸ್ತಿ ಭೂಮಿ ವಕ್ಫ್ ಮಂಡಳಿ ವಶದಲ್ಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಅಳೋ ಗಂಡಸನ್ನ ನಂಬಬಾರದು, ನಿಖಿಲ್‌ ಕುಮಾರಸ್ವಾಮಿ ಕಾಲೇಳೆದ ಯೋಗೇಶ್ವರ್‌