Daily Horoscope

Select Your Language

Notifications

webdunia
webdunia
webdunia
webdunia

ಅಳೋ ಗಂಡಸನ್ನ ನಂಬಬಾರದು, ನಿಖಿಲ್‌ ಕುಮಾರಸ್ವಾಮಿ ಕಾಲೇಳೆದ ಯೋಗೇಶ್ವರ್‌

ChannaPattana By Election 2024, NikhIl Kumaraswamy, CS Yogeshwar
Photo Courtesy X
ರಾಮನಗರ: ಕರ್ನಾಟಕ ವಿಧಾನಸಭೆ ಉಪಚುನಾವಣೆಯಲ್ಲಿ ಹೈವೋಲ್ಟೇಜ್ ಕ್ಷೇತ್ರವಾದ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮೈತ್ರಿ ಅಭ್ಯರ್ಥಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್‌ ಅವರು " ಅಳೋ ಗಂಡಸನ್ನ ನಂಬಬಾರದು " ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಬಿಜೆಪಿ ಜೆಡಿಎಸ್‌ ಮೈತ್ರಿ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಅವರಿಗೆ ಟಾಂಗ್‌ ಕೊಟ್ಟಿದ್ದಾರೆ.

ಪ್ರಚಾರ ವೇಳೆ ನಿಖಿಲ್ ಕುಮಾರಸ್ವಾಮಿ ಈ ಹಿಂದಿನ ಚುನಾವಣೆಯ ಸೋಲನ್ನು ನೆನೆದು ಕಾರ್ಯಕರ್ತರ ಮುಂದೆ ಕಣ್ಣೀರು ಹಾಕಿದ್ದರು. "ನಾನು ಮಾಜಿ ಸಿಎಂ ಮಗ ಹಾಗೂ ಮಾಜಿ ಪ್ರಧಾನಿ ಮೊಮ್ಮಗನಾಗಿದ್ದೇ ನನ್ನ ದುರಾದೃಷ್ಟ ಇರಬೇಕೆನೋ? " ಎಂದು ಪ್ರಶ್ನಿಸಿದ್ದರು. ಈ ವೇಳೆ ಕಾರ್ಯಕರ್ತರು ನಿಖಿಲ್‌ ಅವರನ್ನು ಸಮಾಧಾನ ಮಾಡಿದ್ದರು. ಈ ವಿಚಾರವನ್ನು ಕಾಂಗ್ರೆಸ್‌ ನಾಯಕರು ಲೇವಡಿ ಮಾಡಿದ್ದರು. ಸದ್ಯ ಸಿಪಿ ಯೋಗೇಶ್ವರ್‌ ಕೂಡ ನಿಖಿಲ್‌ಗೆ ಪರೋಕ್ಷವಾಗಿ ಲೇವಡಿ ಮಾಡಿದ್ದಾರೆ.

ಕುಮಾರಸ್ವಾಮಿ ಅವರು ಏನೂ ಅಭಿವೃದ್ಧಿ ಮಾಡದೇ ಮಗನನ್ನು ತಂದು ನಿಲ್ಲಿಸಿದ್ದಾರೆ. ಈ ತಾಲ್ಲೂಕಿಗೆ ಯಾಕೆ ಕುಮಾರಸ್ವಾಮಿ ಬಂದ್ರು, ಯಾಕೆ ಬಿಟ್ಟುಹೋದ್ರೋ ಗೊತ್ತಿಲ್ಲ. ಕುಮಾರಸ್ವಾಮಿ ಎರಡು ಬಾರಿ ಗೆದ್ದು ಯಾವುದೇ ಅಭಿವೃದ್ಧಿ ಮಾಡಿಲ್ಲ. ಅವರದ್ದು ಸ್ವಾರ್ಥ ರಾಜಕಾರಣ. ಜನರ ಅಭಿವೃದ್ಧಿ ಮಾಡದೇ ಮಗನನ್ನ ತಂದು ನಿಲ್ಲಿಸಿದ್ದಾರೆ. ಕ್ಷೇತ್ರದಲ್ಲಿ ಅವರಿಗೆ ಜನವಿರೋಧಿ ಅಲೆ ಇದೆ ಎಂದು ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ವಕ್ಫ್‌ ಸಂಬಂಧ ಹಳೆ ವಿಡಿಯೊ ಹರಿಬಿಟ್ಟು ಅಪಪ್ರಚಾರ: ಬಸವರಾಜ ಬೊಮ್ಮಾಯಿ ಸ್ಪಷ್ಟನೆ