Select Your Language

Notifications

webdunia
webdunia
webdunia
webdunia

ಸಾಲ ಮನ್ನಾ ಸಿಎಂ ಆದೇಶಕ್ಕೆ ಕಾಸಿನ ಕಿಮ್ಮತ್ತು ನೀಡದ ಬ್ಯಾಂಕ್ ಗಳು!

ಸಾಲ ಮನ್ನಾ ಸಿಎಂ ಆದೇಶಕ್ಕೆ ಕಾಸಿನ ಕಿಮ್ಮತ್ತು ನೀಡದ ಬ್ಯಾಂಕ್ ಗಳು!
ಕೊಪ್ಪಳ , ಸೋಮವಾರ, 6 ಆಗಸ್ಟ್ 2018 (17:50 IST)
ರಾಜ್ಯದಲ್ಲಿ ಪ್ರಚಲಿತದಲ್ಲಿರುವ ರೈತರ ಸಾಲ ಮನ್ನಾ ವಿಷಯವು ಬ್ಯಾಂಕ್ ಮತ್ತು ಮುಖ್ಯಮಂತ್ರಿಗಳ ಹಗ್ಗ ಜಗ್ಗಾಟದಲ್ಲಿ  ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆ ಗ್ರಾಮದ ಎಲ್ಲಾ ರೈತರಿಗೆ ಬ್ಯಾಂಕ್ ಅಧಿಕಾರಿಗಳು ನೀವು ಕೂಡಲೇ ಸಾಲ ಕಟ್ಟ ಬೇಕು ಎಂದು ನೋಟೀಸ್ ಜಾರಿಮಾಡಿದ್ದಾರೆ.

ಕೊಪ್ಪಳ ಜಿಲ್ಲೆಯ ಹ್ಯಾಟಿ ಗ್ರಾಮದಲ್ಲಿ ರೈತರು ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಕೊಪ್ಪಳ ನಗರದ ಕೆನರಾ ಬ್ಯಾಂಕ್ ನವರು ನೋಟೀಸ್ ಕಳಿಸಿದ್ದು, ಸಾಲ  ಮರುಪಾವತಿಸಲು ಹೇಳಿದ್ದಾರೆ. ಇದು ಹ್ಯಾಟಿ ಗ್ರಾಮದ ರೈತರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.

ಕಳೆದ 4 ವರ್ಷಗಳಿಂದ  ಬರಗಾಲಕ್ಕೆ ತುತ್ತಾಗಿದ್ದ ರೈತರು ಈಗ ಸರಕಾರ ಸಾಲ ಮನ್ನಾ ಮಾಡಿದ್ದರಿಂದ ತುಸು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ ಬ್ಯಾಂಕಿನವರು ಸಾಲಮನ್ನಾ ವಿಷಯವಾಗಿ ಸರಕಾರದ ಆದೇಶಕ್ಕೆ ಕಿಮ್ಮತ್ತು ನೀಡಿಲ್ಲ. ಹೀಗಾಗಿ ಸಾಲ ತುಂಬುವಂತೆ ನೋಟೀಸ್ ಕಳಿಸಿದ್ದಾರೆ. ಇದರಿಂದ ಮುಂದೇನು ಮಾಡಬೇಕೆಂಬ ಚಿಂತೆ ಅನ್ನದಾತರನ್ನು ಕಾಡುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸ್ ದರ್ಪದ ವಿರುದ್ಧ ತಿರುಗಿಬಿದ್ದ ರೈತರು, ಶಾಸಕ