Select Your Language

Notifications

webdunia
webdunia
webdunia
webdunia

ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಇಂದು ನಿಧನ

ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಇಂದು ನಿಧನ
ಮಂಗಳೂರು , ಶುಕ್ರವಾರ, 11 ಅಕ್ಟೋಬರ್ 2019 (09:47 IST)
ಮಂಗಳೂರು : ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಇಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು (ಶುಕ್ರವಾರ) ನಿಧನರಾಗಿದ್ದಾರೆ. ಮಂಗಳೂರ ಪದವಿನಂಗಡಿಯ ಮನೆಯಲ್ಲಿ ಇಂದು ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿದುಬಂದಿದೆ.





ಗೋಪಾಲನಾಥ್ ಅವರು ಕರ್ನಾಟಕ ಸಂಗೀತ ಪದ್ದತಿಯಲ್ಲಿ ಪ್ರಸಿದ್ದ ಸ್ಯಾಕ್ಸೊಪೋನ್​​​​​​ ವಾದಕರು, ಸ್ಯಾಕ್ಸೊಪೋನ್​​​​​ ವಾದನದಲ್ಲಿ ಕರ್ನಾಟಕ ಸಂಗೀತ ಅಳವಡಿಸಿಕೊಂಡು ವಿಶ್ವಪ್ರಸಿದ್ದಿ ಪಡೆದವರಾಗಿದ್ದಾರೆ. ಕದ್ರಿ ಗೋಪಾಲನಾಥ್​​ ಅವರಿಗೆ ಪದ್ಮಶ್ರೀ ಪ್ರಶಸ್ತಿ, ಕೇಂದ್ರ ಸಂಗೀತ, ನಾಟಕ ಅಕಾಡೆಮಿ ಪ್ರಶಸ್ತಿ, ತಮಿಳುನಾಡು ಸರ್ಕಾರದ ಕಲೈಮಾಮಣಿ, ಕರ್ನಾಟಕ ಕಲಾಶ್ರೀ, ಗಾನಕಲಾ ಭೂಷಣ, ನಾದ ಗಂಧರ್ವ, ನಾದಕಲಾ ರತ್ನ, ನಾದಕಲಾನಿಧಿ, ಸಂಗೀತ ವಿದ್ಯಾರತ್ನ, ಸಂಗೀತ ರತ್ನ, ಶೃಂಗೇರಿ ಮಂತ್ರಾಲಯ ಅಹೋಬಲ ಮುಂದಾದ ಪೀಠಗಳಿಂದ ಸನ್ಮಾನ, ಕಂಚಿ ಕಾಮಕೋಠಿ ಅಸ್ಥಾನ ವಿದ್ವಾನ್​​​​​, ಬೆಂಗಳೂರು ವಿಶ್ವವಿದ್ಯಾಲಯಯ ಗೌರವ ಡಾಕ್ಟರೇಟ್​​​​ ಮುಂದಾದ ಅನೇಕ ಪ್ರಶಸ್ತಿ ಗೌರವಗಳು ದೊರಕಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ಮದುಮಗ ಟಾಯ್ಲೆಟ್ ನಲ್ಲಿ ನಿಂತ ಫೋಟೊವನ್ನು ಸರ್ಕಾರಕ್ಕೆ ನೀಡಿದ್ರೆ ವಧುವಿಗೆ ಸಿಗುತ್ತೆ ದುಡ್ಡು!