Daily Horoscope
✕

ಮನೆಗೆಲಸದಾಕೆಯ ನಂಬಿ ಕೋಟಿ ಕಳೆದುಕೊಂಡ ಕುಟುಂಬ!

Webdunia
ಶುಕ್ರವಾರ, 25 ಫೆಬ್ರವರಿ 2022 (05:06 IST)
ಬೆಂಗಳೂರು : ಬೆಂಗಳೂರಲ್ಲಿ ನೇಪಾಳಿ ಗ್ಯಾಂಗ್ ನಿಂದ ರಾಬರಿ ಆಗಿದೆ. ಮನೆ ಕೆಲಸದಾಕೆಯನ್ನ ನಂಬಿದ ಕುಟುಂಬ 1 ಕೋಟಿ ರೂ ಮೌಲ್ಯದ ಚಿನ್ನಾಭರಣ ಕಳೆದುಕೊಂಡಿದೆ.
 
ಬಸವೇಶ್ವರ ನಗರದ ಗೃಹಲಕ್ಷ್ಮಿ ಲೇಔಟ್ ನಲ್ಲಿ ಘಟನೆ ನಡೆದಿದೆ. ವಿಘ್ನೇಶ್ವರಿ ಎಂಬ ಮಹಿಳೆಯ ಬಾಯಿಗೆ ಬಟ್ಟೆ ತುರುಕಿ, ಕೈಕಾಲು ಕಟ್ಟಿ ರಾಬರಿ ಮಾಡಲಾಗಿದೆ. ವಿಘ್ನೇಶ್ವರಿ ಅವರ ಮಗ ನಂದೀಶ್ ಕಾಲೇಜಿಗೆ ಹೋಗಿದ್ದ ಮತ್ತು ಪತಿ ಕಚೇರಿಗೆ ತೆರಳಿದ್ದರು. ಈ ಸಂದರ್ಭ ನೋಡಿಕೊಂಡು ಕುಕೃತ್ಯವೆಸಗಲಾಗಿದೆ.

ಒಬ್ಬಂಟಿಯಾಗಿದ್ದ ವಿಘ್ನೇಶ್ವರಿ ಅವರು ಮನೆಗೆ ಬಾಗಿಲು ಹಾಕಿಕೊಂಡು ದೇವಸ್ಥಾನಕ್ಕೆ ತೆರಳಿದ್ದರು. ಮನೆ ಕೆಲಸಕ್ಕೆ ಅಂತಾ ಬಂದ ಅನು ಎಂಬ ಮಹಿಳೆ ಮತ್ತು ಆಕೆಯ ಪತಿ ರಾಜೇಂದ್ರ ಹಾಗೂ ಇಡೀ ಟೀಂ ಅನ್ನು ಕರೆದುಕೊಂಡು ವಿಘ್ನೇಶ್ವರಿ ಮನೆಯೊಳಗೆ ಬಂದಿದ್ದಳು. ಮನೆಯಲ್ಲಿದ್ದ 94  ಲಕ್ಷ ರೂಪಾಯಿ ಮೌಲ್ಯದ 2 ಕೆಜಿ ಚಿನ್ನ, 10 ಲಕ್ಷ ರೂಪಾಯಿ ನಗದು ಕದ್ದು ಪರಾರಿಯಾಗಿದ್ದಾರೆ.

ಮನೆಗೆಲಸದ ಅನು ಹಾಗೂ ಗ್ಯಾಂಗ್ ಮನೆಯಲ್ಲಿದ್ದಂತೆ ಮನೆಯಾಕೆ ವಿಘ್ನೇಶ್ವರಿ ವಾಪಸ್ಸು ಮನೆಗೆ ಬಂದಿದ್ದಾರೆ. ಹತ್ತು ನಿಮಿಷ ಬೆಲ್ ಮಾಡಿದರೂ ಅನು ಬಾಗಿಲು ತೆರೆದಿಲ್ಲ. ಕೇಳಿದಾಗ ವಾಶ್ ರೂಂ ನಲ್ಲಿದ್ದೆ ಎಂದು ಕಥೆ ಕಟ್ಟಿದ್ದಳು. ವಿಘ್ನೇಶ್ವರಿ ಬಾಗಿಲು ತೆಗೆದು ಒಳ ಹೋಗುತ್ತಿದ್ದಂತೆ ಹಿಂದೆ ಅವಿತಿದ್ದ ಗ್ಯಾಂಗ್ ಬಟ್ಟೆಯಿಂದ ಕೈಕಾಲು ಕಟ್ಟಿದೆ.

ಅದಾಗಲೇ ಪ್ಯಾಕ್ ಮಾಡಿಟ್ಟಿದ್ದ ಚಿನ್ನಾಭರಣ ಹೊತ್ತು ಪರಾರಿಯಾಗಿದೆ. ಘಟನೆಯ ಸಂಬಂಧ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಪೊಲೀಸರು ಎರಡು ಟೀಂ ಮಾಡಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments