Select Your Language

Notifications

webdunia
webdunia
webdunia
webdunia

ನಕಲಿ ಪಿಸ್ತೂಲ್ ದರೋಡೆ ಪ್ರಕರಣ ಅಂತ್ಯ

ನಕಲಿ ಪಿಸ್ತೂಲ್ ದರೋಡೆ  ಪ್ರಕರಣ ಅಂತ್ಯ
ಬೆಂಗಳೂರು , ಗುರುವಾರ, 16 ಡಿಸೆಂಬರ್ 2021 (16:46 IST)
ಮನೆಗೆ ನುಗ್ಗಿ ಗೃಹಿಣಿ ನಕಲಿ ಪಿಸ್ತೂಲಿನಿಂದ ಬೆದರಿಸಿ ದರೋಡೆ ಮಾಡಿ ಪರಾರಿಯಾಗಿದ್ದ ಕ್ಯಾಬ್ ಚಾಲಕನನ್ನು 16 ಗಂಟೆಯೊಳಗೆ ಗಂಗಮ್ಮನಗುಡಿ ಠಾಣೆ ಪೊಲೀಸರು ಬಂಧಿಸಿ 5 ಲಕ್ಷ ಬೆಲೆಯ ಮಾಂಗಲ್ಯಸರ, ಕಾರು ಹಾಗೂ ಪಿಸ್ತೂಲು ವಶಪಡಿಸಿಕೊಂಡಿದ್ದಾರೆ.ಮೂಲತಃ ವಿಜಯಪುರದ ಲಿಂಗಪ್ಪ (32) ಬಂಧಿತ ಆರೋಪಿ.ನಂದಿನಿ ಎಂಬ ಗೃಹಿಣಿ ತಮ್ಮ ಮೂರು ವರ್ಷದ ಮಗುವಿನ ಜತೆ ಮನೆಯಲ್ಲಿದ್ದರು. ಆ ಸಂದರ್ಭದಲ್ಲಿ ಮಧ್ಯಾಹ್ನ 2.30ರ ಸುಮಾರಿನಲ್ಲಿ ಆರೋಪಿ ಇವರ ಮನೆಗೆ ನುಗ್ಗಿ ನಕಲಿ ಪಿಸ್ತೂಲು ತೋರಿಸಿ ಚೀರಾಡದಂತೆ ಬೆದರಿಸಿದ್ದಾನೆ. ನಂತರ ನಂದಿನಿ ಅವರ ಮಾಂಗಲ್ಯಸರ ಕಸಿದುಕೊಂಡು ಕಾರಿನಲ್ಲಿ ಪರಾರಿಯಾಗಿದ್ದನು. ತಕ್ಷಣ ನಂದಿನಿ ಅವರು ಗಂಗಮ್ಮನಗುಡಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
 
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಇನ್‍ಸ್ಪೆಕ್ಟರ್ ಸಿದ್ದೇಗೌಡ ಮತ್ತು ಸಿಬ್ಬಂದಿ ಘಟನಾ ಸ್ಥಳದ ಅಕ್ಕಪಕ್ಕದಲ್ಲಿನ ಸಿಸಿಟಿವಿ ಆಧರಿಸಿ ಕಾರಿನ ನಂಬರ್ ಪತ್ತೆಹಚ್ಚಿದ್ದಾರೆ. ನಂತರ ಆರೋಪಿಯ ಜಾಡು ಹಿಡಿದು ಘಟನೆ ನಡೆದ 16 ಗಂಟೆಯೊಳಗೆ ಬಂಸುವಲ್ಲಿ ಯಶಸ್ವಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣುಮಕ್ಕಳ ವಿವಾಹದ ವಯಸ್ಸು 18ರಿಂದ ಎಷ್ಟಕ್ಕೆ ಏರಿಕೆ?