ಅರಣ್ಯದ ಅಂಚಿನಲ್ಲಿರುವ ಹೋಂ ಸ್ಟೇ ಮತ್ತು ರೆಸಾರ್ಟ್‌ಗಳಿಗೆ ಪ್ರವಾಸಿಗರನ್ನು ಸೆಳೆಯಲು ಹುಲಿ ಅಥವಾ ಚಿರತೆ ಕಾಣಿಸಿಕೊಂಡ ಕುರಿತ ಗಿಮಿಕ್‌ಗೆ ಕಡಿವಾಣ ಹಾಕಲು ಅರಣ್ಯಾಧಿಕಾರಿಗಳು ನಿರ್ಧರಿಸಿದ್ದು, ಕೆಲ ಖಾಸಗಿ ರೆಸಾರ್ಟ್ ಗಳ ವಿರುದ್ಧ ದಾರು ದಾಖಲಿಸಿದ್ದಾರೆ.ಚಿಕ್ಕಮಗಳೂರಿನ ಗಾಲ್ಫ್ ಕ್ಲಬ್ ರಸ್ತೆಯಲ್ಲಿ ಸೋಮವಾರ ತಡರಾತ್ರಿಯಿಂದ ಎರಡು ಹುಲಿಗಳು ಕಾಣಿಸಿಕೊಂಡಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿದಾಡುತ್ತಿದ್ದು, ಅದರಂತೆ ರೆಸಾರ್ಟ್ ಮಾಲೀಕರು ಹಾಗೂ ಜನರ ವಿರುದ್ಧ ರೇಂಜ್ ಫಾರೆಸ್ಟ್ ಆಫೀಸರ್ ಸ್ವಾತಿ ಎಲ್ ಮಂಗಳವಾರ ದೂರು ದಾಖಲಿಸಿದ್ದಾರೆ. ಚಿಕ್ಕಮಗಳೂರಿನ ಸಿಇಎನ್ ಪೊಲೀಸರು ನಾನ್ ಕಾಗ್ನೈಸಬಲ್ ವರದಿ ದಾಖಲಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಅರಣ್ಯಾಧಿಕಾರಿಗಳು ಸೈಯದ್ ಮಸೂದ್ ಮತ್ತು ಸಮೀರ್ ಹುಸೇನ್ ಎಂಬ ಇಬ್ಬರು ವ್ಯಕ್ತಿಗಳನ್ನು ಕೂಡ ವಿಚಾರಣೆಗೆ ಕರೆದೊಯ್ದರು ಎಂದು ತಿಳಿದುಬಂದಿದೆ.