Select Your Language

Notifications

webdunia
webdunia
webdunia
webdunia

ರೆಸಾರ್ಟ್‍ವೊಂದರಲ್ಲಿ ಜೂಜಾಡಿಸುತ್ತಿದ್ದ ಅಡ್ಡದ ಮೇಲೆ ದಾಳಿ

Attack on the side gambling at a resort
bangalore , ಸೋಮವಾರ, 20 ಸೆಪ್ಟಂಬರ್ 2021 (21:12 IST)
ಆಂಧ್ರಪ್ರದೇಶದಿಂದ ಪಂಟರ್‍ಗಳನ್ನು ಕರೆಸಿಕೊಂಡು ರೆಸಾರ್ಟ್‍ವೊಂದರಲ್ಲಿ ಜೂಜಾಡಿಸುತ್ತಿದ್ದ ಅಡ್ಡದ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೆÇಲೀಸರು 19 ಮಂದಿ ಬಂಧಿಸಿ, 13.50 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. 
ಚಿಕ್ಕಜಾಲ ಪೆÇಲೀಸ್ ಠಾಣೆ ವ್ಯಾಪ್ತಿಯ ವಿಂಡ್ ಫ್ಲವರ್ ರೆಸಾರ್ಟ್‍ನಲ್ಲಿ ಜೂಜಾಟದಲ್ಲಿ ತೊಡಗಿದ್ದಾಗ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೆÇಲೀಸರು ತಿಳಿಸಿದರು. ಆಂಧ್ರ ಪ್ರದೇಶದಿಂದ ಬಂದಿ ಆರೋಪಿಗಳು ಶನಿವಾರ ವಿಂಡ್‍ಫ್ಲವರ್ ರೆಸಾರ್ಟ್‍ನಲ್ಲಿ ಜೂಜಾಟ ಆಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೆÇಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಜೂಜಾಟದ ಪಣಕ್ಕಿಟ್ಟಿದ್ದ  
 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಸಿಸಿಬಿ ಜಂಟಿ ಪೆÇಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಉಪ ಪೆÇಲೀಸ್ ಆಯುಕ್ತ ಕೆ.ಪಿ. ರವಿಕುಮಾರ್ ಮಾರ್ಗದರ್ಶನದಲ್ಲಿ ಸಹಾಯ ಪೆÇಲೀಸ್ ಆಯುಕ್ತ ಹನುಮಂತರಾಯ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‍ಐ)ಗೆ ಹಂಚಿಕೊಳ್ಳುತ್ತಿದ್ದವನನ್ನು ಬಂಧಿಸಿದ ಸಿಸಿಬಿ ಪೊಲೀಸರು