Webdunia - Bharat's app for daily news and videos

Install App

ಅದ್ಧೂರಿ ಗಣರಾಜ್ಯೋತ್ಸವ: ರಫೇಲ್ ಸೇರಿದಂತೆ 75 ವಿಮಾನಗಳ ಹಾರಾಟ ಪ್ರದರ್ಶನ

Webdunia
ಸೋಮವಾರ, 17 ಜನವರಿ 2022 (21:15 IST)
ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಭವ್ಯವಾದ ಫ್ಲೈಪಾಸ್ಟ್ ನಡೆಯಲಿದ್ದು, ಇದರಲ್ಲಿ ಭಾರತೀಯ ರಕ್ಷಣಾ ಪಡೆಗಳ 75 ವಿಮಾನಗಳು ದೆಹಲಿಯ ರಾಜ್ ಪಥ್ ಮೇಲೆ ಹಾರಾಟ ನಡೆಸಲಿವೆ.
ಈ ವರ್ಷದ ಗಣರಾಜ್ಯೋತ್ಸವದ ಆಚರಣೆ ಮತ್ತಷ್ಟು ವಿಶೇಷವಾಗಿ ನಡೆಯಲಿದ್ದು, ಪರೇಡ್ ನಲ್ಲಿ ವಾಯು ಸೇನೆ, ಭೂಸೇನೆ ಹಾಗೂ ನೌಕಾಪಡೆಯ ವಿಮಾನಗಳು ಸೇರಿದಂತೆ 75 ವಿಮಾಗಳು ಪಂಥಸಂಚಲನದ ಸಂದರ್ಭದಲ್ಲಿ ಫ್ಲೈಪಾಸ್ಟ್ ನಡೆಸಲಿವೆ.
ಈ ಬಗ್ಗೆ ಮಾಹಿತಿ ನೀಡಿದ ಐಎಎಫ್ ಪ್ರೋ ವಿಂಗ್ ಕಮಾಂಡರ್ ಇಂದ್ರಾನಿಲ್ ನಂದಿ, ಗಣರಾಜ್ಯೋತ್ಸವದ ಪರೇಡ್ ನಲ್ಲಿ ಫ್ಲೈಪಾಸ್ಟ್ ಅತ್ಯಂತ ಕುತೂಹಲದಾಯಕ ಕ್ಷಣವಾಗಿದೆ. ಈ ವೇಳೆ ಭಾರತೀಯ ನೌಕಾ ಪಡೆಯ ಮಿಗ್ 29ಕೆ ಮತ್ತು ಪಿ-81, ಜಾಗ್ವಾರ್ ಫೈಟರ್ ಜಟ್ ಕೂಡ ತಮ್ಮ ಸಾಮರ್ಥ್ಯ ಪ್ರದರ್ಶಿಸಲಿವೆ.
ಐದು ರಫೇಲ್ ಜೆಟ್ ಗಳು ‘ವಿನಾಶ್’ ರಚನೆಯಲ್ಲಿರಲಿದ್ದು, ಮಿಗ್ 29ಕೆ ಮತ್ತು ಪಿ-81 ಕಣ್ಗಾವಲು ವಿಮಾನಗಳು ‘ವರುಣ’ ರಚನೆಯಲ್ಲಿ ಹಾರಾಟ ನಡೆಸಲಿವೆ. 17 ಜಾಗ್ವಾರ್ ಯುದ್ಧ ವಿಮಾನಗಳು ’75’ ರ ಆಕಾರದಲ್ಲಿ ಹಾರಾಟ ನಡೆಸಲಿವೆ ಎಂದು ತಿಳಿಸಿದರು.
ಈ ಬಾರಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಿಂದ ಗಣರಾಜ್ಯೋತ್ಸವದ ಆಚರಣೆ ಪ್ರಾರಂಭವಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪುರಿ ದೇವಸ್ಥಾನ ಕಾಲ್ತುಳಿತ: ಜಿಲ್ಲಾಧಿಕಾರಿ ಎಸ್‌ಪಿಯನ್ನೇ ವರ್ಗಾವಣೆ ಮಾಡಿದ ಸರ್ಕಾರ

88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಬಾನು ಪುಪ್ತಾಕ್‌

ಜೂನ್ 23ರಂದು ಇರಾನ್ ಜೈಲಿನ ಮೇಲೆ ಇಸ್ರೇಲ್ ದಾಳಿಯಲ್ಲಿ ಅಧಿಕಾರಿಗಳು ಸೇರಿ 71ಮಂದಿ ಸಾವು

ಅಶೋಕ್ ಜ್ಯೋತಿಷ್ಯ ಕಲಿತಿದ್ದರೆ ನನ್ನ ಭವಿಷ್ಯ ಕೇಳಬೇಕಿತ್ತು: ಡಿಕೆ ಶಿವಕುಮಾರ್‌

ಪುರಿ ಕಾಲ್ತುಳಿತ ದುರಂತ, ದೊಡ್ಡ ಎಚ್ಚರಿಕೆ: ರಾಹುಲ್ ಗಾಂಧಿ ಸಂತಾಪ

ಮುಂದಿನ ಸುದ್ದಿ
Show comments