ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಒಮಿಕ್ರಾನ್ ಸೋಂಕು ಪತ್ತೆ ಹಿನ್ನೆಲೆ 3ನೇ ಅಲೆಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮೂರನೇ ಅಲೆ ತಡೆಯಲು ಡಿಸೆಂಬರ್-ಜನವರಿ ನಿರ್ಣಾಯಕವಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ತಜ್ಞರು ಸಲಹೆ ನೀಡುತ್ತಲೇ ಇದ್ದಾರೆ.
ಡಿಸೆಂಬರ್-ಜನವರಿಯಲ್ಲೇ ಹೆಚ್ಚು ಆರ್ಥಿಕ ವ್ಯವಹಾರಗಳು ಶುರುವಾಗಲಿದ್ದು ಜನರ ಚಟುವಟಿಕೆ ಹಾಗೂ ಓಡಾಟಗಳು ಹೆಚ್ಚಾಗಲಿವೆ. ಗುಂಪು ಸೇರುವುದು ಹೆಚ್ಚಾದರೆ ಸೋಂಕು ಹರಡುವಿಕೆಗೆ ಇದುವೇ ಕಾರಣವಾಗಲಿದೆ ಅನ್ನೋದು ತಜ್ಞರ ಆತಂಕವಾಗಿದೆ. ಹೀಗಾಗಿಯೇ ರಾಜ್ಯದಲ್ಲೂ ಕೋವಿಡ್ ಸಲಹಾ ಸಮಿತಿ ಸದಸ್ಯರು ಸರಣಿ ಸಭೆಗಳ ನಡೆಸುತ್ತಿದ್ದಾರೆ.