ಕಾಡು ಹುಲಿ V/S ಸಫಾರಿ ಹುಲಿ ನಡುವೆ ರೋಚಕ ಫೈಟ್

ಮಂಗಳವಾರ, 13 ಆಗಸ್ಟ್ 2019 (14:00 IST)
ಹುಲಿ ಅಂದರೆ ಸಾಕು ಭಯ ಬೀಳೋರೆ ಹೆಚ್ಚು. ಹುಲಿ ಮತ್ತೊಂದು ಹುಲಿ ಜತೆ ಕಾದಾಡ ನಡೆಸಿದ್ರೆ ಹೇಗಿರಬೇಡಾ?

ಕಾಡಿನ ಹುಲಿ ಹಾಗೂ ಸಫಾರಿ ಹುಲಿಯ ನಡುವೆ ಕಾದಾಟ ನಡೆದಿದೆ. ಎರಡು ಹುಲಿಗಳ ಫೈಟಿಂಗ್ ದೃಶ್ಯ ಸಫಾರಿ ವಾಹನದಲ್ಲಿದ್ದ ಪ್ರಾಣಿ ಪ್ರಿಯರ ಮೊಬೈಲ್ ನಲ್ಲಿ ಸೆರೆಯಾಗಿದೆ.

ಬನ್ನೇರುಘಟ್ಟ ಬಯೋಲಾಜಿಕಲ್ ಸಫಾರಿಯಲ್ಲಿ ಕಾಡಿನ ಹುಲಿ ಹಾಗೂ ಸಫಾರಿ ಹುಲಿ ನಡುವೆ ಕಾದಾಟ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಅಧಿಕೃತವಾಗಿ ಕರ್ನಾಟಕ ಫಾರೆಸ್ಟ್ ಡಿಪಾರ್ಟ್ಮೆಂಟ್ ನ ಪೇಜ್ ನಲ್ಲಿ ಪ್ರಕಟಮಾಡಲಾಗಿದೆ. ಎರಡು ಹುಲಿಗಳ ನಡುವಿನ ಫೈಟ್ ಸಫಾರಿ ಪ್ರಿಯರಿಗೆ ರೋಚಕ ಮನರಂಜನೆ ನೀಡಿದೆ.

ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯಲ್ಲಿ ಸಂಚಾರ ಮಾಡಿಕೊಂಡಿದ್ದ ಕಾಡಿನ ಹುಲಿ ಆಗಾಗ ಸಫಾರಿಯಲ್ಲಿನ ಹುಲಿಗಳ ಜಾಗದ ಬಳಿ ಕಾಣಿಸಿಕೊಂಡು ಸಫಾರಿಯಲ್ಲಿನ ಹುಲಿಗಳ ಮೇಲೆ ಆಗಾಗ್ಗೆ ಕಾದಾಟ ನಡೆಸುತ್ತಲೆ ಇದೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಒಂದು ಕೋಟಿ ದೇಣಿಗೆ ನೀಡಿದ ಅನರ್ಹ ಶಾಸಕ