Publish Date: Wed, 12 Jun 2019 (19:29 IST)
Updated Date: Wed, 12 Jun 2019 (19:31 IST)
ಜಿಂದಾಲ್ ಗೆ ಭೂಮಿ ಮಾರಾಟ ನಿರ್ಧಾರದ ಮರುಪರಿಶೀಲನೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಪ್ರತಿಭಟನೆ ಹಾದಿ ತುಳಿದಿದೆ.
ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೇಳಿಕೆ ನೀಡಿದ್ದು, ಜಿಂದಾಲ್ ಕುರಿತ ಮುಖ್ಯಮಂತ್ರಿಗಳ ನಿರ್ಧಾರ ಸ್ವಾಗತಾರ್ಹ. ಆದರೆ ನಮ್ಮ ವಿರೋಧ ಇರೋದು ಜಿಂದಾಲ್ ಗೆ ಭೂಮಿ ಮಾರಾಟವೇ ಬೇಡ ಅಂತ. ಸರ್ಕಾರ ಮಾರಾಟ ಮಾಡಲು ಮುಂದಾಗಿರುವ ಭೂಮಿಯಲ್ಲಿ ಕೋಟ್ಯಂತರ ಮೌಲ್ಯದ ಕಬ್ಬಿಣದ ಅದಿರಿನ ನಿಕ್ಷೇಪ ಇದೆ. ಕಬ್ಬಿಣದ ನಿಕ್ಷೇಪ ಕುರಿತು ಸರ್ಕಾರ ತಜ್ಞರಿಂದ ಅಧ್ಯಯನ ನಡೆಸಲಿ ಎಂದರು.
ನಮ್ಮ ಪ್ರತಿಭಟನೆ ಮುಂದುವರೆಯಲಿದೆ. ಸಿಎಂ ಭರವಸೆ ಕೊಟ್ಟಿರುವ 45 ಸಾವಿರ ಕೋಟಿ ರೂ ಸಾಲಮನ್ನ ಕೂಡಲೇ ಮಾಡಲಿ. ಬರ ನಿರ್ವಹಣೆ ಸಮರ್ಥವಾಗಿ ನಿರ್ವಹಿಸಲಿ. ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ಎರಡು ದಿನ ಅಹೋರಾತ್ರಿ ಪ್ರತಿಭಟನೆ ಮಾಡಲಿದ್ದೇವೆ ಎಂದರು.
ಈ ಮೊದಲು ಮೂರು ದಿನ ಪ್ರತಿಭಟನೆಗೆ ನಿರ್ಧರಿಸಿದ್ವಿ. ಆದ್ರೆ ಈಗ 14 ಮತ್ತು 15 ರಂದು ಮಾತ್ರ ಅಹೋರಾತ್ರಿ ಧರಣಿ ಮಾಡ್ತಿದ್ದೇವೆ ಎಂದರು.
16 ರಂದು ಪ್ರತಿಭಟನೆ ಮಾಡಲ್ಲ. ಯಾಕಂದ್ರೆ 16 ರಂದು ನಮ್ಮ ಎಲ್ಲ ಸಂಸದರೂ ದೆಹಲಿಗೆ ಹೋಗ್ತಿದಾರೆ ಅಂತ
ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.