Select Your Language

Notifications

webdunia
webdunia
webdunia
webdunia

ಎಕ್ಸಾಮ್ ವಾರಿಯರ್ಸ್ ಪುಸ್ತಕ ವಿತರಿಸಿದ ಪ್ರಹ್ಲಾದ್ ಜೋಶಿ

ಎಕ್ಸಾಮ್ ವಾರಿಯರ್ಸ್ ಪುಸ್ತಕ ವಿತರಿಸಿದ ಪ್ರಹ್ಲಾದ್ ಜೋಶಿ
ಧಾರವಾಡ , ಶನಿವಾರ, 28 ಜನವರಿ 2023 (06:32 IST)
ಧಾರವಾಡ : ಪ್ರಧಾನಿ ನರೇಂದ್ರ ಮೋದಿಯವರು ನಡೆಸಿದ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿದ್ಯಾರ್ಥಿಗಳ ನಡುವೆ ಕುಳಿತು ವೀಕ್ಷಿಸಿದರು.

ವಿದ್ಯಾರ್ಥಿಗಳ ಜೊತೆ ಪ್ರಧಾನಿ ಮೋದಿ ಅವರ ಚರ್ಚೆ ಬಳಿಕ ಹುಬ್ಬಳ್ಳಿಯಲ್ಲಿ ಜೋಶಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಮೋದಿಯವರ ಆಶಯದಂತೆ, ವಿದ್ಯಾರ್ಥಿಗಳು ಪರೀಕ್ಷೆಗಳ ಬಗ್ಗೆ ಭಯಪಡದೇ, ಸಕಾರಾತ್ಮಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಜೋಶಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಉತ್ತಮ ತಯಾರಿ ಹಾಗೂ ಆತ್ಮಸ್ಥೈರ್ಯದಿಂದ ಯಾವುದೇ ಪರೀಕ್ಷೆಯನ್ನು ಕೂಡ ಯಶಸ್ವಿಯಾಗಿ ಎದುರಿಸಬಹುದು ಎಂಬ ಸ್ಪೂರ್ತಿದಾಯಕ ನುಡಿಗಳನ್ನಾಡಿ ವಿದ್ಯಾರ್ಥಿಗಳಲ್ಲಿ ಸ್ಥೈರ್ಯ ತುಂಬಿದರು.

 

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನ ವಿರುದ್ಧ ಭಾರತದ ಜಲಯುದ್ಧ!