Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಸದಸ್ಯರಲ್ಲೇ ಪರ ವಿರೋಧ ವ್ಯಕ್ತವಾಗಿ ಸಭೆಗೆ ಗೈರು

ಕಾಂಗ್ರೆಸ್ ಸದಸ್ಯರಲ್ಲೇ ಪರ ವಿರೋಧ ವ್ಯಕ್ತವಾಗಿ ಸಭೆಗೆ ಗೈರು
ಚಳ್ಳಕೆರೆ , ಮಂಗಳವಾರ, 20 ಸೆಪ್ಟಂಬರ್ 2022 (21:31 IST)
ನಗರಸಭೆಯ ಸಾಮಾನ್ಯ ಸಭೆಯಲ್ಲಿ ವಾರ್ಡ್ ಗಳ ಜ್ವಲಂತ ಸಮಸ್ಯೆ ಹಾಗೂ ಅಗತ್ಯ ಕಾಮಗಾರಿಗಳ ಕ್ರಿಯಾಯೋಜನೆ ಮಂಜೂರಾತಿ ನೀಡ ಬೇಕಾದ ಸಭೆ ಸದಸ್ಯರು ಗೈರು ಹಾಜರಾದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಗಿದೆ.
 
ಹೌದು ಇದು ಚಳ್ಳಕೆರೆ ನಗರಸಭೆ ಅಧ್ಯಕ್ಷೆ ಸುಮಕ್ಕ ಇವರ ಅಧ್ಯಕ್ಷತೆಯಲ್ಲಿ ಸೆ.೧೨ ರಂದು ನಡೆಯಬೇಕಿದ್ದ ಕೌನ್ಸಿಲ್ ಸಾಮಾನ್ಯಸಭೆಯಲ್ಲಿ ಆಡಳಿತಾತ್ಮಕ ತಾಂತಿಕ ಕಾರಣದಿಂದ ಸೆ.೧೯ ಕ್ಕೆ ಸಾಮಾನ್ಯಸಭೆಯನ್ನು ಮುಂದೂಡಲಾಗಿತ್ತು ಸೋಮವಾರ  ೧೧ ಗಂಟೆಗೆ ನಡೆಯ ಬೇಕಿದ್ದ ಸಾಮಾನ್ಯ ಸಭೆಗೆ ಆಡಳೀತ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಸದಸ್ಯರು ಸಭೆಗೆ ಬಂದಿದ್ದರು.
 
ಕಾಂಗ್ರೆಸ್ ಪಕ್ಷದಸದಸ್ಯರು ಕೆಲವರು ಒಳಗೆ ಬಾರದೆ ಹೊಗಿನಿಂದಲೇ ದೂರವಾಣಿ ಮೂಲಕ ಒಳಗಿರುವ ಸದಸ್ಯರನ್ನು ಸಭೆಯಿಂದ ಕರೆದು ಸಭೆಗೆ ಕೋರಂ ಇಲ್ಲದ ಕಾರಣ ಮಧ್ಯಾಹ್ನ ೧.೩೦ ರ ನಂತರ ಸಭೆಯನ್ನು ರದ್ದು ಪಡಿಸಿ ಮುಂದೂಡಲಾಗಿದೆ.
 
ಜೆಡಿಎಸ್‌ಸದಸ್ಯರ ವಿ.ವೈ.ಪ್ರಮೋದ್ ಮಾತನಾಡಿ ನಗರದ ೩೧ ವಾರ್ಡ್ಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದ್ದು ಕ್ರಿಯಾ ಯೋಜನೆ ರೂಪಿಸಿ ಸಭೆಯಲ್ಲಿ ಅನುಮೋದನೆ ಪಡೆದು ಟೆಂಡರ್ ಪ್ರಕಿಯೆಗೆ ಕಳಿಸ ಬೇಕು ಅಭಿವೃದ್ಧಿ ವಿಷದಲ್ಲಿ ಪಕ್ಷ ಬೇದ ಮರೆತು ನಗರದ ಅಭಿವೃದ್ಧಿಗೆ ಶ್ರಮಿಸ ಬೇಕು ಆದರೆ ಕಾಂಗ್ರೆಸ್ ಪಕ್ಷದ ಆಡಳೀತ ಪಕ್ಷದಲ್ಲಿ ಬಣಗಳಿದ್ದು ಹೊಯ್ಸಳ ಬ್ಯಾಂಕ್ ವಿಷಯ ಸಭೆಗೆ ಬಂದಿರುವ ಕಾರಣ ಆಡಳಿತ ಪಕ್ಷದ ಸದಸ್ಯರೇ ಸಭೆ ಗೈರು ಹಾರಜಾರಿಯಾಗಿರುವುದು ನಗರದ ಅಭಿವೃದ್ಧಿಗೆ ಕುಂಠಿತವಾಗುವಂತೆ ಮಾಡಿದ್ದಾರೆ.
 
ಬಿಜೆಪಿ ನಾಮನಿರ್ದೇಶಕ ಸದಸ್ಯರಾದ ಮನೋಜ್, ಪಾಲನೇತ್ರ,ವೀರೇಶ್, ಇಂದ್ರೇಶ್, ಹಾಗೂ ಹಿರಿಯ ಸದಸ್ಯ ಜಯಣ್ಣ ಸಾಮಾನ್ಯ ಸಭೆಗೆ  ನಗರಸಭೆಗೆ ಸೇರಿದ ಶ್ರೀ ಪಾರ್ಶ್ವನಾಥ ದಿಗಂಬರ ಜೈನ್ ಟ್ರಸ್ಟ್ (ರಿ) (ಹೊಯ್ಸಳ ಬ್ಯಾಂಕ್) ಕಟ್ಟಡವನ್ನು ಕಾರ್ಯಾಲಯದ ಸುಪರ್ದಿಗೆ ಪಡೆಯುವಂತೆ ಆಡಳೀತ ಪಕ್ಷದ ಉಪಾಧ್ಯಕ್ಷೆ ಮಂಜುಳ ಆರ್ ಪ್ರಸನ್ನಕುಮಾರ್ ರವರು ಪತ್ರ ನೀಡಿರುವ ಹಾಗೂ ಸದರಿ ಸ್ವತ್ತಿನ ಲೀಜ್ ಅವಧಿಯು ಮುಕ್ತಾಯವಾಗಿರುವ ಪ್ರಯುಕ್ತ ಕಛೇರಿಯ ವಶಕ್ಕೆ ಪಡೆಯುವಂತೆ ಸಭೆಗೆ ವಿಷದ ತಂದ ಕಾರಣ ಕಾಂಗ್ರೆಸ್ ಸದಸ್ಯರಲ್ಲೇ ಪರ ವಿರೋಧ ವ್ಯಕ್ತವಾಗಿ ಸಭೆಗೆ ಗೈರಾಗಿರುತ್ತಾರೆ ಎರಡು ಬಾರಿಯೂ ಸಭೆ ಮುಂದೂಡಿರುವುದರಿಂದ ಯಾವುದೋ ಒಂದು ವಿಷಯಕ್ಕೆ ನಗರದ ಜ್ವಲಾಂತ ಸಮಸ್ಯೆಗಳಿಗೆ ಅಡ್ಡಿಯಾಗುವಂತೆ ಮಾಡಿದ್ದಾರೆ ಎಂದು ವಿರೋಧ ಪಕ್ಷದ ಸದಸ್ಯರು ಸಭೆಯಲ್ಲಿ ಅಕ್ರೋಶವ್ಯಕ್ತಪಡಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರಿನ ಪೊಲೀಸ್ ಠಾಣೆಯಲ್ಲಿ ಸೀಮಂತ ಕಾರ್ಯ