Publish Date: Wed, 13 Sep 2023 (18:47 IST)
Updated Date: Wed, 13 Sep 2023 (18:59 IST)
ಸಿದ್ದರಾಮಯ್ಯ ವಿರುದ್ಧ ಹರಿಪ್ರಸಾದ್ ಬೇಸರ ವಿಚಾರವಾಗಿ ಈಶ್ವರಾನಂದ ಪುರಿ ಶ್ರೀಗಳು ಹರಿಪ್ರಸಾದ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.ಈಶ್ವರಾನಂದಪುರಿ ಶ್ರೀ,ಕನಕಗುರುಪೀಠ,ಹೊಸದುರ್ಗದವರಾಗಿದ್ದು, ನಾನು ಕುರುಬರು ಅಂತ ಮಾತನಾಡ್ತಿಲ್ಲ.ಹರಿಪ್ರಸಾದರ ಮಾತುಗಳನ್ನ ಗಮನಿಸಿದ್ದೇನೆ.ದೊಡ್ಡನಾಯಕನಿಗೆ ಇಷ್ಟು ಹೊಟ್ಟೆ ಕಿಚ್ಚಿರಬಾರ್ದು.ಸಿದ್ದರಾಮಯ್ಯ ಎರಡನೇ ಬಾರಿ ಮುಖ್ಯಮಂತ್ರಿಯಾದ್ರು.ಅವರು ಕುರುಬರನ್ನೇ ಬೆಳಸಿದ್ರು.ಅವರ ಸಮುದಾಯ ಬೆಳೆಯಿತು.ಹರಿಪ್ರಸಾದ್ ಪ್ರಬುದ್ಧ ರಾಜಕಾರಣಿ.ಅವರು ಈ ರೀತಿ ಮಾತನಾಡಬಾರದಿತ್ತು.ಸಿದ್ದರಾಮಯ್ಯ ಮೊದಲ ಸಿಎಂ ಆದ್ರು.ಆಗೇನು ಹೆಚ್ಚು ಕುರುಬರು ಮಂತ್ರಿಗಳಾಗಿರಲಿಲ್ಲ.ಮೊಗವೀರರನ್ನ ಸಚಿವರನ್ನ ಮಾಡಿದ್ದು ಇದೇ ಸಿದ್ದರಾಮಯ್ಯ.ಜನಗಳಿಗೆ ತಪ್ಪು ಸಂದೇಶ ನೀಡಿದ್ದಾರೆ.ನಾವ್ಯಾರು ಮಾತನಾಡದಿದ್ದರೆ ಕಷ್ಟವಾಗುತ್ತದೆ.ಸಿದ್ದರಾಮಯ್ಯ ಕೋಟ್ಯಂತರ ಮನಸ್ಸಿನಲ್ಲಿ ಉಳಿದಿದ್ದಾರೆ.ಅದನ್ನ ಯಾರಿಂದಲೂ ಕೀಳೋಕೆ ಸಾಧ್ಯವಿಲ್ಲ.ಹರಿಪ್ರಸಾದ್ ಅವರು ಇದನ್ನ ಅರ್ಥ ಮಾಡಿಕೊಳ್ಬೇಕು.ಅಧಿಕಾರವನ್ನ ಎಲ್ಲರಿಗೂ ಹಂಚಿದ್ದಾರೆ.ಇದು ಒಬ್ಬ ಜನನಾಯಕನಿಗಿರುವ ಗುಣ ಎಂದು ಸಿದ್ದರಾಮಯ್ಯ ಬೆಂಬಲಕ್ಕೆ ಶ್ರೀಗಳು ನಿಂತಿದ್ದಾರೆ.