Publish Date: Fri, 28 Aug 2020 (09:24 IST)
Updated Date: Fri, 28 Aug 2020 (09:26 IST)
ಬೆಳಗಾವಿ : ಪೀರನವಾಡಿ ನಾಕಾ ಬಳಿ ರಾತ್ರೋರಾತ್ರಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ.
ಗುರುತಿಸಿದ ಜಾಗದಲ್ಲೇ ಸುಮಾರು 5 ಅಡಿ ಎತ್ತರದ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ. ಆ. 30ರವರೆಗೆ ಸಚಿವ ರಮೇಶ್ ಜಾರಕಿಹೊಳಿ ವಿವಾದ ಇತ್ಯರ್ಥಪಡಿಸುವುದಾಗಿ ಕಾಲಾವಕಾಶ ಕೇಳಿ ಭರವಸೆ ನೀಡಿದ್ದರು. ಭರವಸೆ ಹಿನ್ನಲೆಯಲ್ಲಿ ಪ್ರತಿಭಟನಾಕಾರರು ಧರಣಿ ವಾಪಸ್ ಪಡೆದಿದ್ದರು.
ಆದ್ರೆ ಈಗ ಮಧ್ಯರಾತ್ರಿ ಪ್ರತಿಮೆ ಪ್ರತಿಷ್ಠಾಪನೆ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಪೀರನವಾಡಿ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.