Select Your Language

Notifications

webdunia
webdunia
webdunia
webdunia

ಬಹಿರಂಗ ಸಭೆ ನಡೆಸುವ ಮೂಲಕ ಈಶ್ವರಪ್ಪ ಪಕ್ಷಕ್ಕೆ ಡ್ಯಾಮೇಜ್ ಮಾಡಿದ್ದಾರೆ: ಆರ್. ಅಶೋಕ್

ಬಹಿರಂಗ ಸಭೆ ನಡೆಸುವ ಮೂಲಕ ಈಶ್ವರಪ್ಪ ಪಕ್ಷಕ್ಕೆ ಡ್ಯಾಮೇಜ್ ಮಾಡಿದ್ದಾರೆ: ಆರ್. ಅಶೋಕ್
ಬೆಂಗಳೂರು , ಶನಿವಾರ, 29 ಏಪ್ರಿಲ್ 2017 (19:17 IST)
ಬಹಿರಂಗ ಸಭೆ ನಡೆಸುವ ಮೂಲಕ ಈಶ್ವರಪ್ಪ ಪಕ್ಷಕ್ಕೆ ಡ್ಯಾಮೇಜ್ ಮಾಡಿದ್ದಾರೆ ಎಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾಜಿ ಡಿಸಿಎಂ ಆರ್. ಅಶೋಕ್ ಹೇಳಿದ್ದಾರೆ. ಏನೇ ಸಮಸ್ಯೆ ಇದ್ದರೂ ಪಕ್ಷದ ಒಳಗೇ ಚರ್ಚಿಸಬೇಕಿತ್ತು. ಅದನ್ನ ಬಿಟ್ಟು ಬಹಿರಂಗ ಸಭೆ ನಡೆಸಿ ಪಕ್ಷಕ್ಕೆ ಡ್ಯಾಮೇಜ್ ಮಾಡಿದ್ದಾರೆ ಎಂದು ಅಶೋಕ್ ಹೇಳಿದ್ದಾರೆ.

ಕೆ.ಎಸ್. ಈಶ್ವರಪ್ಪ ಬಹಿರಂಗ ಸಭೆ ನಡೆಸಿದ್ದು ಸರಿಯಲ್ಲ. ಪಕ್ಷದಲ್ಲಿರುವ ಗೊಂದಲ ಸರಿಪಡಿಸುವಂತೆ ಮುರಳೀಧರ್ ರಾವ್`ಗೆ ಮನವಿ ಮಾಡುತ್ತೇವೆ. ಮುರಳೀಧರ್ ರಾವ್ ಸಂಧಾನ ಮಾತುಕತೆ ನಡೆಸುತ್ತಾರೆ ಎಂದು ಆರ್. ಅಶೋಕ್ ಹೇಳಿದ್ದಾರೆ.

ಈಶ್ವರಪ್ಪನವರ ಭಿನ್ನರಾಗಕ್ಕೆ ಶಿವಮೊಗ್ಗದ ಸ್ಥಳೀಯ ರಾಜಕೀಯ ಕಾರಣ. ಇದನ್ನ ದೊಡ್ಡ ಭಿನ್ನಮತವೆಂದು ಬಿಂಬಿಸುವುದು ಸರಿಯಲ್ಲ. ವರಿಷ್ಠರು ಎಲ್ಲವನ್ನೂ ಸರಿ ಮಾಡುತ್ತಾರೆ ಎಂದು ಆರ್. ಅಶೋಕ್ ಹೇಳಿದ್ದಾರೆ. ಈ ಮಧ್ಯೆ, ಬೆಂಗಳೂರಿಗೆ ಬರುತ್ತಿರುವ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಮುಖಂಡರ ಜೊತೆ ಸಭೆ ನಡೆಸುವ ಸಾಧ್ಯತೆ ಇದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ತ್ರಿವಳಿ ತಲಾಖ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಉತ್ತರ ಪ್ರದೇಶದ ಸಚಿವ