Publish Date: Sat, 30 Oct 2021 (14:29 IST)
Updated Date: Sat, 30 Oct 2021 (14:33 IST)
ನಟ ಪುನೀತ್ ರಾಜ್ ಕುಮರ್ ಅವರ ಅಂತ್ಯಕ್ರಿಯೆ ಇಂದು ಸಂಜೆಯೇ ನಡೆಸಲಾಗುವುದು. ಪುತ್ರಿ ಧ್ರುತಿ ವಿದೇಶದಿಂದ ಆಗಮಿಸಿದ ನಂತರ ಮೆರವಣಿಗೆ ಬಗ್ಗೆ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿದೇಶದಿಂದ ಪುನೀತ್ ಪುತ್ರಿ ಧ್ರುತಿ ಆಗಮಿಸುವುದು ವಿಳಂಬವಾಗುತ್ತಿದೆ.
ಇಂದು ಮಧ್ಯಾಹ್ನ 1 ಗಂಟೆಗೆ ದೆಹಲಿಗೆ ಆಗಮಿಸಬೇಕಿತ್ತು. ಅವರು ದೆಹಲಿಗೆ ಬಂದ ಕೂಡಲೇ ಮೆರವಣಿಗೆ ಸಮಯ ಹಾಗೂ ಮಾರ್ಗದ ಕುರಿತು ತೀರ್ಮಾನಿಸಲಾಗುವುದು ಎಂದರು.
ಕಂಠೀರವ ಸ್ಟುಡಿಯೋದಲ್ಲಿ ಅಂತ್ಯ ಸಂಸ್ಕಾರದ ವಿಧಿವಿಧಾನಗಳು ಆರಂಭಗೊಳ್ಳಲಿದ್ದು, ಅಂತ್ಯ ಸಂಸ್ಕಾರದ ವೇಳೆ ಕುಟುಂಬದ ಸದಸ್ಯರು ಹಾಗೂ ಗಣ್ಯರಿಗೆ ಮಾತ್ರ ಅವಕಾಶ ಇರಲಿದೆ. ಆದ್ದರಿಂದ ಅಭಿಮಾನಿಗಳು ಸಹಕರಿಸಬೇಕು ಎಂದು ಬೊಮ್ಮಾಯಿ ಹೇಳಿದರು.