Select Your Language

Notifications

webdunia
webdunia
webdunia
webdunia

ಪುನೀತ್ ನೋಡಲು ನೂಕು ನುಗ್ಗಲು ಲಾಠಿ ಚಾರ್ಜ್

Puneet rajkumar
ಬೆಂಗಳೂರು , ಶನಿವಾರ, 30 ಅಕ್ಟೋಬರ್ 2021 (14:17 IST)
ಅಭಿಮಾನಿಗಳನ್ನೇ ದೇವರು ಎಂದು ಪೂಜಿಸುತ್ತಿದ್ದ ನಟ ಪುನೀತ್ ಅಂತಿಮ ದರ್ಶನ ಪಡೆಯಲು ಸಾವಿರಾರು ಮಂದಿ ಸಾಲುಗಟ್ಟಿ ನಿಂತಿದ್ದಾರೆ. ಅಪ್ಪು ಹೆಸರು ಕೂಗಿ ಗೋಳಾಡುವವರ ಅಕ್ರಂದನ ಮುಗಿಲು ಮುಟ್ಟಿದೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.ಅಂತಿಮ ದರ್ಶನಕ್ಕೆ ಅವಕಾಶ ಕೊಡುವಂತೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಅವಕಾಶ ಕಲ್ಪಿಸಲಾಯಿತು. ಈ ವೇಳೆ ನೂಕು ನುಗ್ಗಲು ಶುರುವಾಗಿ ತಳ್ಳಾಟ ಆರಂಭವಾಯಿತು. ಕಂಠೀರವ ಕ್ರಿಡಾಂಗಣದಲ್ಲಿ ಅಭಿಮಾನಿಗಳ ಜನ ಸಾಗರವೇ ಸೇರಿದ್ದು, ಸರತಿ ಸಾಲಿನಲ್ಲಿ ತೆರಳಿ ಅಂತಿಮ ನಮನ ಸಲ್ಲಿಸಿದರು. ರಾಜಕಾರಣಿಗಳು ಹಾಗೂ ಗಣ್ಯರಿಗೆ ಪ್ರತ್ಯೇಕವಾಗಿ ತೆರಳಿ ಅಂತಿಮ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. ಅಭಿಮಾನಿಗಳಿಗೆ ಮತ್ತು ಸಾರ್ವಜನಿಕರಿಗೆ ಪ್ರತ್ಯೇಕ ಅವಕಾಶ ಕಲ್ಪಿಸಲಾಗಿತ್ತು.ಲಘು ಲಾಠಿ ಬೀಸಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ಸಾವಿಗೆ ಶಾಲೆಗೂ ರಜೆ.. ಪ್ರೀತಿಯ ಅಪ್ಪು