ಸಿಲಿಕಾನ್ ಸಿಟಿಯ ಪ್ರವಾಸಿಗರ ನೆಚ್ಚಿನ ತಾಣವಾದ ಕಬ್ಬನ್ ಪಾರ್ಕ್ ಗೆ ನಿತ್ಯ ಸಾವಿರಾರು ಜನರು ಭೇಟಿ ನೀಡ್ತಾರೆ. ಆದ್ರಲ್ಲೂ ಕಬ್ಬನ್ ಪಾರ್ಕ್ ನಲ್ಲಿರುವ ಬಾಲಭವನವಂತೂ ಮಕ್ಕಳ ನೆಚ್ಚಿನ ತಾಣ. ಮಕ್ಕಳು ಆಟವಾಡಲೆಂದು ಬಾಲಭವನವನ್ನ ನಿರ್ಮಾಣ ಮಾಡಿದ್ರು, ಆದ್ರೆ ಮಕ್ಕಳ ಉಪಯೋಗಕ್ಕೆ ಇಲ್ಲದಂತೆ ಅವ್ಯವಸ್ಥೆಯಿಂದ ಕೂಡಿತ್ತು. ಕೊರೊನಾದಿಂದ ಕೆಲದಿನಗಳ ಮಟ್ಟಿಗೆ ಕ್ಲೋಸ್ ಕೂಡ ಆಗಿತ್ತು. ಆದ್ರೆ ಈಗ ಬಾಲಭವನ ಮತ್ತೆ ಮಕ್ಕಳ ಉಪಯೋಗಕ್ಕಾಗಿ ಓಪನ್ ಆಗ್ತಿದೆ.ಕಬ್ಬನ್ ಪಾರ್ಕ್ ಉದ್ಯಾನವನ ಶನಿವಾರ, ಭಾನುವಾರ ಬಂತೆಂದ್ರೆ ಜನರಿಂದ ತುಂಬಿರುತ್ತೆ. ವೀಕೆಂಡ್ ಮೂಡ್ ನಲ್ಲಿದ್ದ ಜನರು ಫ್ಯಾಮಿಲಿ ಸಮೇತ ಕಬ್ಬನ್ ಪಾರ್ಕ್ ಗೆ ಭೇಟಿ ನೀಡ್ತಾರೆ. ಆದ್ರಲ್ಲೂ ಮಕ್ಕಳಿದ್ರೆ ಬಾಲಭವನಕ್ಕೆ ಕರೆದುಕೊಂಡು ಹೋಗ್ತಾರೆ. ಬಾಲಭವನ ಮಾಡಿರುವುದೇ ಮಕ್ಕಳಿಗಾಗಿ , ಮಕ್ಕಳು ಆಟವಾಡಿ ಎಂಜಾಯ್ ಮಾಡಲೆಂದು , ಆದ್ರೆ ಈ ಬಾಲಭವನ ಸುಮಾರು ಒಂದೂವರೆ ವರ್ಷದಿಂದ ಮಕ್ಕಳಿಗೆ ಉಪಯೋಗವಾಗದಂತೆ ಅವ್ಯವಸ್ಥೆಯಿಂದ ಕೂಡಿತ್ತು. ಆದ್ರೆ ಈಗ ಮಕ್ಕಳಿಗೆ ಅನುಕೂಲವಾಗಲೆಂದು ಬಾಲಭವನದಲ್ಲಿ ಉಯ್ಯಾಲೆ, ಜಾರೋ ಬಂಡಿ, ವಿಲ್ ಗೇಮ್ , ಇನ್ನು ಇತ್ಯಾದಿ ಆಟಿಕೆಗಳನ್ನ ನಿರ್ಮಾಣ ಮಾಡಿದ್ರು. ಜೊತೆಗೆ ಇಂದು ಉದ್ಘಾಟನೆ ಕೂಡ ಮಾಡಿದ್ದಾರೆ. ಆದ್ರೆ ಈ ಆಟಿಕೆಗಳೆಲ್ಲ ಬೇರೆ ಅಂಗವಿಕಲ ಮಕ್ಕಳಿಗಾಗಿ ಮಾತ್ರ ಉಪಯೋಗವಾಗ್ತಿದೆ.ಆದ್ರೆ ಸಾಮಾನ್ಯ ಮಕ್ಕಳು ಆಟವಾಡುವ ಆಟಿಕೆಗಳನ್ನ ಇನ್ನು ನಿರ್ಮಾಣ ಮಾಡಿಲ್ಲ. ಈಗ ಸದ್ಯಕ್ಕೆ ಅಂಗವಿಕಲ ಮಕ್ಕಳನ್ನ ಬಿಟ್ರೆ ಸಾಮಾನ್ಯ ಮಕ್ಕಳಿಗೆ ಈ ಬಾಲಭವನದಲ್ಲಿ ನೋ ಎಂಟ್ರಿ. ಹೀಗಾಗಿ ಎಲ್ಲಾ ಮಕ್ಕಳನ್ನ ಬಿಟ್ರೆ ಚನ್ನಾಗಿರುತ್ತೆ ಅಂತಾ ಸಾಮಾನ್ಯ ಮಕ್ಕಳು ಕೂಡ ಕೇಳಿಕೊಳ್ತಿದ್ಧಾರೆ.
ಈ ಬಾಲಭವನ ಅಂತೂ ನೋಡುವುದಕ್ಕೆ ಆಕರ್ಷಣೀಯವಾಗಿದ್ದು , ಎಲ್ಲ ಮಕ್ಕಳನ್ನ ಕೈ ಬಿಸಿ ಕರೆಯುತ್ತೆ. ಹೀಗಾಗಿ ಸಾಮಾನ್ಯ ಮಕ್ಕಳಿಗೂ ಸಿದ್ದವಾಗಿರುವ ಆಟಿಕೆ ನೋಡಿದ್ರು ಆಟ ಆಡಬೇಕೆನ್ನಿಸುತ್ತಿದೆ. ಇನ್ನು ಉಳಿದ ಆಟಿಕೆಗಳು , ಟ್ರೈನ್ , ಬೋಟ್ ಎಲ್ಲಾವು ಕೂಡ ಅವ್ಯವಸ್ಥೆಯಿಂದ ಕೂಡಿದೆ. ಅದನ್ನ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿರ್ಮಾಣ ಮಾಡುವ ಕಾರ್ಯ ಮುಂದುವರೆಯುತ್ತಿದೆ. ಏನಿಲ್ಲ ಅಂದ್ರು ಸುಮಾರು 1 ರಿಂದ 2 ತಿಂಗಳ ಒಳಗಾಗಿ ಮಕ್ಕಳ ಅನುಕೂಲಗಾಗಿ ಅವ್ಯವಸ್ಥೆಯಿಂದ ಕೂಡಿರುವ ಆಟಿಕೆಗಳನ್ನ ಮರು ಬಳಕೆ ಮಾಡುವ ಕಾರ್ಯ ಮುಂದುವರೆಯುತ್ತಿದೆ. ಎಲ್ಲಾ ಕೆಲಸಗಳು ಮುಗಿದ ನಂತರ ಸಾಮಾನ್ಯ ಮಕ್ಕಳಿಗೂ ಆಟವಾಡಲು ಬಾಲಭವನದ ಒಳಗೆ ಬಿಡಲಾಗ್ತಿದೆ. ಅಲ್ಲಿವರೆಗೂ ಸಾಮಾನ್ಯ ಮಕ್ಕಳಿಗೆ ಬಾಲಭವನದ ಒಳಗೆ ಪ್ರವೇಶ ಇಲ್ಲವೆಂದು ಕಬ್ಬನ್ ಪಾರ್ಕ್ ನ್ನ ಆಡಳಿತ ಮಂಡಳಿಯ ಮ್ಯಾನೇಜರ್ ಚಿಕ್ಕಮ್ಮ ಬಸವರಾಜ್ ಹೇಳಿದ್ದಾರೆ.ಕಬ್ಬನ್ ಪಾರ್ಕ್ ನ್ನ ಬಾಲಭವನವನ್ನ ಸ್ಮಾಟಿ ಸಿಟಿ ಯೋಜನೆಯ ಅಡಿಯಲ್ಲಿ ಅಭಿವೃದ್ಧಿ ಮಾಡಲಾಗ್ತಿದೆ. ಜುಲೈ ಅಂತ್ಯದ ವೇಳೆಗೆ ಸಾರ್ವಜನಿಕರಿಗೆ , ಮಕ್ಕಳಿಗೆ ಪ್ರವೇಶ ನೀಡುವ ನಿಟ್ಟಿನಲ್ಲಿ ಕಬ್ಬನ್ ಪಾರ್ಕ್ ಆಳಿತ ಮಂಡಳಿಯವರು ಅವಿರಹಿತವಾಗಿ ಶ್ರಮವಹಿಸುತ್ತಿದ್ದಾರೆ.