Select Your Language

Notifications

webdunia
webdunia
webdunia
webdunia

ಲೋಕಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ವಿದ್ಯುತ್ ದರ ಇಳಿಕೆ

Electricity

Krishnaveni K

ಬೆಂಗಳೂರು , ಸೋಮವಾರ, 1 ಏಪ್ರಿಲ್ 2024 (12:48 IST)
ಬೆಂಗಳೂರು: ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವಾಗ ಕರ್ನಾಟಕದಲ್ಲಿ ವಿದ್ಯುತ್  ದರ ಇಳಿಕೆಯಾಗಿದೆ. ಅದೂ ಬರೋಬ್ಬರಿ 15 ವರ್ಷದ ಬಳಿಕ.

ಗೃಹಬಳಕೆಯಲ್ಲಿ 100 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡುವವರಿಗೆ ಪ್ರತಿ ಯುನಿಟ್ ಗೆ 1.10 ರೂ. ಕಡಿಮೆ ಮಾಡಲಾಗಿದೆ. ಈ ಮೂಲಕ ರಾಜ್ಯದಲ್ಲಿ ಬರೋಬ್ಬರಿ 15 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಿದ್ಯುತ್ ದರ ಇಳಿಕೆಯಾದಂತಾಗಿದೆ.

2024-25 ನೇ ಸಾಲಿಗೆ ಅನ್ವಯವಾಗುವಂತೆ ಏಪ್ರಿಲ್ 1 ರಿಂದ ಈ ಹೊಸ ದರ ಅನ್ವಯವಾಗಲಿದೆ. ಮೊದಲು 100 ಯೂನಿಟ್ ಗಿಂತ ಹೆಚ್ಚು ಬಳಕೆ ಮಾಡುವವರಿಗೆ ಪ್ರತಿ ಯೂನಿಟ್ ಗೆ 7 ರೂ. ನಿಗದಿ ಮಾಡಲಾಗಿತ್ತು. ಇದೀಗ ಪ್ರತಿ ಯೂನಿಟ್ ಗೆ 5.90 ಯೂನಿಟ್ ದರ ನಿಗದಿಯಾಗಲಿದೆ.

ಸರ್ಕಾರ ಈಗ ಗೃಹಜ್ಯೋತಿ ನಿಯಮದಡಿ 200 ಯೂನಿಟ್ ಒಳಗೆ ವಿದ್ಯುತ್ ಬಳಸುವವರಿಗೆ ಉಚಿತ ವಿದ್ಯುತ್ ನೀಡುತ್ತಿದೆ. ಹೀಗಾಗಿ ಈ ಹೊಸ ದರ ಗೃಹಜ್ಯೋತಿ ಸೌಲಭ್ಯ ಹೊಂದಿದವರಿಗೆ ಅನ್ವಯಿಸುವುದಿಲ್ಲ. ಮುಂದಿನ ತಿಂಗಳಿನಿಂದ ಹೊಸ ಬಿಲ್ ಬರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಬಕಾರಿ ಅಕ್ರಮ ಹಗರಣ: ಅರವಿಂದ್ ಕೇಜ್ರಿವಾಲ್ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ