Publish Date: Sat, 07 Jan 2023 (12:54 IST)
Updated Date: Sat, 07 Jan 2023 (12:44 IST)
ಮಂಡ್ಯ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 7 ಕ್ಷೇತ್ರಗಳ ಪೈಕಿ ಅಧಿಕ ಕ್ಷೇತ್ರಗಳಲ್ಲಿ ಶತಾಯಗತಾಯ ಗೆಲುವು ಸಾಧಿಸಬೇಕೆಂದು ಪ್ಲಾನ್ ಹಾಕಿಕೊಂಡಿರುವ ಬಿಜೆಪಿ ಮಂಡ್ಯ ಗೆಲ್ಲಲು ಹಿಂದುತ್ವದ ಅಜೆಂಡಾ ಹಿಡಿದು ಹೊರಟಿದೆ.
ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ ಮೂಲಕ ಚುನಾವಣೆಯ ರಂಗು ಹೆಚ್ಚಿಸಲು ಮುಂದಾಗಿದೆ. ಹೌದು. ಇಷ್ಟು ದಿನಗಳ ಕಾಲ ಜಾಮಿಯಾ ಮಸೀದಿಯಲ್ಲ ಅದು ಹನುಮನ ಮಂದಿರ ಎಂದು ಹಿಂದೂಪರ ಸಂಘಟನೆಗಳು ಹೋರಾಟ ಮಾಡುತ್ತಿದ್ದವು.
ಈ ವೇಳೆ ರಾಜ್ಯ ಬಿಜೆಪಿ ಈ ಬಗ್ಗೆ ತುಟಿ ಬಿಚ್ಚದೆ ಮೌನ ವಹಿಸಿತ್ತು. ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ನಾಯಕರು ಮಂಡ್ಯದ ಎಲ್ಲಾ ಬಿಜೆಪಿ ಕಾರ್ಯಕ್ರಮಗಳಲ್ಲೂ ಜಾಮಿಯಾ ಮಸೀದಿಯ ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ.