ಅಪಾರ್ಟ್‌ಮೆಂಟ್‌ನಲ್ಲಿ ಬೆದರಿಕೆ ಹಾಕಿ ಮತಯಾಚನೆ: ಡಿಕೆಶಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

Sampriya
ಗುರುವಾರ, 18 ಏಪ್ರಿಲ್ 2024 (16:14 IST)
Photo Courtesy X
ಬೆಂಗಳೂರು: ಅಪಾರ್ಟ್‌ಮೆಂಟ್‌ನಲ್ಲಿ ಮತದಾರರಿಗೆ ಬೆದರಿಕೆ ಹಾಕಿ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್‌ಗೆ ಮತಹಾಕುವಂತೆ ಕೇಳಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು ವಿರುದ್ಧ ಬಿಜೆಪಿ ಚುನಾವಣಾ ಯೋಗಕ್ಕೆ ದೂರು ನೀಡಿದೆ.

ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿ ಕೆ ಸುರೇಶ್‌ಗೆ ಮತದಾನ ಮಾಡುವಂತೆ ಡಿ ಕೆ ಸುರೇಶ್ ಅವರು ಅಪಾರ್ಟ್‌ಮೆಂಟ್‌ನಲ್ಲಿ ಚುನಾವಣೆ ಪ್ರಚಾರ ಮಾಡುವ ವೇಲೆ  'ನಿಮಗೆ ಹಕ್ಕುಪತ್ರ ನೀಡಬೇಕಾದರೆ, ಕಾವೇರಿ ನೀರು ಬೇಕಿದ್ದರೆ ನನ್ನ ತಮ್ಮನಿಗೆ ಮತ ಹಾಕಿ' ಎಂದು ಕೇಳಿರುವ ಡಿಕೆಶಿ ಮಾತನಾಡಿದ  3 ನಿಮಿಷದ ವಿಡಿಯೋವನ್ನು ರಾಜ್ಯ ಬಿಜೆಪಿ ಘಟಕ ಟ್ವೀಟ್​ ಮಾಡಿದೆ.

ಈ ಸಂಬಂಧ ಇದೀಗ ಬಿಜೆಪಿ ನಿಯೋಗ ಉಪಮುಖ್ಯಮಂತ್ರಿ ಡಿಕೆ ಸುರೇಶ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿ, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.

ಡಿಕೆಶಿ ನೀಡಿದ ಭಾಷಣ ಹೀಗಿದೆ: ನಿಮಗೆ ನನ್ನೊಂದು ಪ್ರಾಮಾಣಿಕ ಪ್ರಶ್ನೆ ಕೇಳುತ್ತೇನೆ, ನಾನು ಇಲ್ಲಿಗೆ ವ್ಯವಹಾರಕ್ಕಾಗಿ ಬಂದಿದ್ದೇನೆ. ಈ ಅಪಾರ್ಟ್ಮೆಂಟ್​​ನಲ್ಲಿ 2510 ಮನೆಗಳಿವೆ. 6424 ಮತಗಳಿವೆ. ನಿಮ್ಮ ಎರಡು ಸಮಸ್ಯೆಗಳೆಂದರೆ ಒಂದು, ನಿಮ್ಮ ಹಕ್ಕುಪತ್ರ ನಿಮಗೆ ಹಸ್ತಾಂತರವಾಗದಿರುವುದು. ಎರಡನೇಯದ್ದು ಕಾವೇರಿ ನೀರು. ಒಂದು ವೇಳೆ ಈ ಎರಡನ್ನೂ ನಾನು ನಿಮಗೆ ನೀಡಿದರೆ ನೀವು ನನಗೆ ಏನು ಕೊಡುತ್ತೀರಿ?. ನಿಮ್ಮ ಬೂತ್​ ಆರ್​ಆರ್​ ನಗರದಲ್ಲಿದೆ. 2-3 ಬೂತ್​ನಲ್ಲಿ ನಮ್ಮ ಪರವಾದ ಮತಗಳಿವೆ. ಪ್ರಶ್ನಾರ್ಥಕವಾಗಿ ಉಳಿದಿರುವುದು ನಿಮ್ಮ ಬೂತ್​ ಮಾತ್ರ. ಈಗ ಹೇಳಿ ಏನು ಮಾಡುತ್ತೀರಿ ಎಂದು ಕೇಳಿದ್ದರು.

ಇದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಅದಲ್ಲದೆ ಬಿಜೆಪಿ ಕರ್ನಾಟಕ ಟ್ವೀಟ್ ಮಾಡಿ,  ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊತ್ವಾಲ್ ಬ್ರದರ್ಸ್‌ಗಳ ಗೂಂಡಾಗಿರಿ ದಿನೇ ದಿನೇ ಹೆಚ್ಚಾಗುತ್ತಿದೆ.

ನಿನ್ನೆ ರೈತನ ಹೊಲ ಸುಟ್ಟು, ರೈತನಿಗೆ ಗನ್ ಪಾಯಿಂಟ್ ಇಟ್ಟು ವಾತಾವರಣವನ್ನು ಭಯಭೀತಗೊಳಿಸಿದ್ದರು.

ಇಂದು ಅಪಾರ್ಟ್ಮೆಂಟ್ ನಿವಾಸಿಗಳ ಸಭೆ ನಡೆಸಿ ನೀವು @DKSureshINCಗೆ ವೋಟು ಹಾಕಿಲ್ಲವೆಂದರೆ ನಿಮಗೆ ನೀರು ಕೊಡುವುದಿಲ್ಲ, ಹಕ್ಕು ಪತ್ರ ನೀಡುವುದಿಲ್ಲ ಎಂದು ನೇರವಾಗಿಯೇ ಡಿಸಿಎಂ @DKShivakumar
 ಅವರೇ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾರೆ.

ನಿಮ್ಮ ಈ ಗೊಡ್ಡು ಬೆದರಿಕೆಗಳಿಗೆ ಜನತೆ ಏಪ್ರಿಲ್ 26 ರಂದು ಅಂತಿಮ ಮೊಳೆ ಹೊಡೆಯುವುದು ಖಚಿತ -ನಿಶ್ಚಿತ-ಖಂಡಿತ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರುಬೈಯಾ ಸಯೀದ್ ಅಪಹರಣ ಪ್ರಕರಣದಲ್ಲಿ ಶಂಕಿತನ ಬಂಧನ, ಏನಿದು ಕೇಸ್

ಸಿದ್ದರಾಮಯ್ಯ ಸರ್ಕಾರದಿಂದ ರೈತರ ಅಸಡ್ಡೆ: ಬಿವೈ ವಿಜಯೇಂದ್ರ

ನಾಳೆ ಡಿಕೆ ಶಿವಕುಮಾರ್ ಮನೆಯಲ್ಲಿ ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್‌, ಕುತೂಹಲ ಮೂಡಿಸಿದ ನಾಯಕರ ನಡೆ

ವಿಪಕ್ಷಗಳ ಗದ್ದಲಕ್ಕೆ ಸತತ ಸೋಲು ಕಾರಣ: ಕಂಗನಾ ರಣಾವತ್ ಕಿಡಿ

ಪ್ರತಾಪ್ ಸಿಂಹ, ಯತ್ನಾಳ್ ವಿರುದ್ಧ ನಾಲಿಗೆ ಹರಿಬಿಟ್ಟ ಎಸ್‌ಡಿಪಿಐ ಮುಖಂಡನ ವಿರುದ್ಧ ದೂರು

ಮುಂದಿನ ಸುದ್ದಿ
Show comments