Publish Date: Sat, 17 Mar 2018 (12:31 IST)
Updated Date: Sat, 17 Mar 2018 (12:35 IST)
ಬೆಂಗಳೂರು: ನಾವು ಹೇಳಿದ್ರೆ ಅಧಿಕಾರಿಗಳು 9 ತಿಂಗಳಲ್ಲ, ಒಂಭತ್ತೇ ದಿನಕ್ಕೆ ವರ್ಗಾವಣೆಯಾಗಬೇಕು. ಅಧಿಕಾರಿಗಳೇನು ಮೇಲಿಂದ ಬಂದವರಾ? ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಉಡಾಫೆಯ ಹೇಳಿಕೆ ನೀಡಿದ್ದಾರೆ.
ಅಧಿಕಾರಿಗಳು ಸರ್ಕಾರದಿಂದ ದೊಡ್ಡವರಲ್ಲ. ನಾವು ಹೇಳಿದಂತೆ ಅವರು ನಡೆದುಕೊಳ್ಳಬೇಕು ಎಂದು ಸಚಿವ ರಾಯರೆಡ್ಡಿ ಹೇಳಿಕೆ ನೀಡಿದ್ದಾರೆ.
ಐಪಿಎಸ್, ಐಎಎಸ್ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಸರ್ಕಾರಕ್ಕೆ ಮುಖಭಂಗವಾದ ಬೆನ್ನಲ್ಲೇ ಹೇಳಿಕೆ ನೀಡಿರುವ ಅವರು ಅಧಿಕಾರಿಗಳು ದೊಡ್ಡವರಲ್ಲ, ಸರ್ಕಾರ ಹೇಳಿದ ಹಾಗೆ ಕೇಳಬೇಕು ಎಂದು ಉದ್ಧಟತನದ ಉತ್ತರ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ