Select Your Language

Notifications

webdunia
webdunia
webdunia
webdunia

ಬಿ.ನಾಗೇಂದ್ರ ಮನೆ ಮೇಲೆ ಇಡಿ ದಾಳಿ ಅವಶ್ಯಕತೆಯಿರಲಿಲ್ಲ: ಡಿಸಿಎಂ ಶಿವಕುಮಾರ್

Valmiki Development Corporation Scam

Sampriya

ತುಮಕೂರು , ಬುಧವಾರ, 10 ಜುಲೈ 2024 (20:18 IST)
ತುಮಕೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಸಂಬಂಧ ಮಾಜಿ ಸಚಿವ ಬಿ.ನಾಗೇಂದ್ರ ಮನೆ ಹಾಗೂ ಇತರೆಡೆಗಳಲ್ಲಿ ಇಡಿ ದಾಳಿ ನಡೆಸುವ ಅವಶ್ಯಕತೆ ಇರಲಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ತಿಪಟೂರು ತಾಲ್ಲೂಕು ನೊಣವಿನಕೆರೆ ಕಾಡಸಿದ್ಧೇಶ್ವರ ಮಠಕ್ಕೆ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಳೇ ಈ ಪ್ರಕರಣವನ್ನು ಎಸ್‌ಐಟಿಗೆ ವಹಿಸಿದ್ದು, ತನಿಖೆ ನಡೆಸಲಾಗುತ್ತಿದೆ. ಈ ವೇಳೆ ಇಡಿ ದಾಳಿ ನಡೆಸುವುದು ಅಗತ್ಯವಿರಲಿಲ್ಲ ಎಂದರು.

ಈ ಹಗರಣದಲ್ಲಿ ಅಧಿಕಾರಿಗಳು ಹಣ ದುರುಪಯೋಗ ಮಾಡಿಕೊಂಡಿರುವುದು ಗೊತ್ತಾಗಿದ್ದು, ಸಚಿವರು, ಶಾಸಕರ ಕೈವಾಡ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲಿದ್ದಾರೆ ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್‌ಗೆ ರಾಮ- ರಹೀಂ ಎಲ್ಲರೂ ಒಂದೇ: ಸಚಿವ ಈಶ್ವರ ಖಂಡ್ರೆ