Select Your Language

Notifications

webdunia
webdunia
webdunia
webdunia

ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಇಡಿ ಖಡಕ್ ಡ್ರಿಲ್

ಲಕ್ಷ್ಮೀ ಹೆಬ್ಬಾಳ್ಕರ್
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಿಹಾರ್ ಜೈಲು ಸೇರಿರೋ ದಿನವೇ ಕಾಂಗ್ರೆಸ್ ನ ಮಹಿಳಾ ಶಾಸಕಿಗೆ ಇಡಿ 9 ಗಂಟೆ ಡ್ರಿಲ್ ನಡೆಸಿದೆ.

ಕಾಂಗ್ರೆಸ್ ನ ಪ್ರಭಾವಿ ನಾಯಕಿ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಇಡಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.
ಡಿಕೆಶಿ ಜೊತೆಗೆ ಇರುವ ಸಂಬಂಧ? ಡಿಕೆಶಿ ತಮ್ಮ ಆಸ್ತಿಯನ್ನು ನಿಮ್ಮಹೆಸರಿಗೆ ಮಾಡಿಟ್ಟಿದ್ದಾರಾ? ನಿಮ್ಮ ಯಾವ ಯಾವ ವ್ಯವಹಾರದಲ್ಲಿ ಡಿಕೆಶಿ ಹಣ ಹೂಡಿಕೆ ಮಾಡಿದ್ದಾರೆ ಎಂಬೆಲ್ಲ ಪ್ರಶ್ನೆಗಳನ್ನು ಕೇಳಿದ್ದಾರೆ.

50 ಕೋಟಿ ಹಣ ಡಿಕೆಶಿಯಿಂದ ಬಂದಿದೆ ಎನ್ನಲಾಗುತ್ತಿರುವ ಕುರಿತು ಅಲ್ಲದೇ ಇನ್ನಿತರ ಮಹತ್ವದ ವಿಷಯಗಳ ಬಗ್ಗೆ ಡ್ರಿಲ್ ನಡೆಸಿದ್ದಾರೆ.  ಕೆಲವು ದಾಖಲೆಗಳನ್ನು ಹಾಜರುಪಡಿಸುವಂತೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಇಡಿ ಅಧಿಕಾರಿಗಳು ಖಡಕ್ ಸೂಚನೆ ನೀಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ನ. 5 ರಿಂದ 16 ರವರೆಗೆ ಕೊಪ್ಪಳದಲ್ಲಿ ಸೇನಾ ಭರ್ತಿ ರ್ಯಾಲಿ