Publish Date: Wed, 15 Nov 2023 (20:49 IST)
Updated Date: Wed, 15 Nov 2023 (20:53 IST)
ಪಾಕಿಸ್ತಾನದಲ್ಲಿ ಬುಧವಾರ ಬೆಳಗ್ಗೆ 5.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಪಾಕಿಸ್ತಾನದ ಹವಾಮಾನ ಇಲಾಖೆ ಹೇಳಿದೆ. ಶ್ರೀಲಂಕಾದ ಕೊಲಂಬೊದಲ್ಲಿ ಕೂಡ ಮಂಗಳವಾರ ತಡ ರಾತ್ರಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ. ಶ್ರೀಲಂಕಾ ಹಾಗೂ ಪಾಕಿಸ್ತಾನದಲ್ಲಿ ಭೂಕಂಪನದಿಂದಾಗಿ ಯಾವುದೇ ಅನಾಹುತ ಅಥವಾ ಸಾವು ನೋವು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.