Select Your Language

Notifications

webdunia
webdunia
webdunia
webdunia

ಎನ್ಇಪಿ ಶಿಕ್ಷಣ ಪದ್ದತಿಗೆ ಆಯೋಗ ರಚನೆಗೆ ಡಿವಿಎಸ್ ಖಂಡನೆ

ಎನ್ಇಪಿ ಶಿಕ್ಷಣ ಪದ್ದತಿಗೆ ಆಯೋಗ ರಚನೆಗೆ ಡಿವಿಎಸ್ ಖಂಡನೆ
bangalore , ಗುರುವಾರ, 12 ಅಕ್ಟೋಬರ್ 2023 (18:20 IST)
ಎನ್ಇಪಿ ಪದ್ಧತಿಯನ್ನು ಎಲ್ಲ ಆಯಾಮಗಳಲ್ಲೂ ಪರಿಶೀಲಿಸಿ, ಅಧ್ಯಯನ ನಡೆಸಿ ತರಲಾಗಿದೆ.ಅದರಲ್ಲಿ ಪ್ರಾದೇಶಿಕ ಭಾಷೆಗಳಿಗೆ ಆಧ್ಯತೆ ಕೊಡಬೇಕು ಅನ್ನೋದು ಇದೆ.ಎನ್‌ಇಪಿಯಲ್ಲಿ ಪ್ರಾದೇಶಿಕ ಭಾಷೆಗಳಿಗೆ ಮಾನ್ಯತೆ ಕೊಡಲಾಗಿದೆ.ಎನ್ಇಪಿ ರದ್ದು ಮಾಡಿರೋದು ಖಂಡನೀಯ.ಎನ್ಇ‌ಪಿ ತರುತ್ತಿರುವುದು ಮಾರಕ ನಡೆ.ಅವರಿಗೆ ಬೇಕಾದ ಹಾಗೆ ತಜ್ಞರ ವರದಿ ಪಡೆಯಲು ಮುಂದಾಗಿದ್ದಾರೆ.ಅವರಿಗೆ ಬೇಕಾದ ವರದಿ ಪಡೆಯಲು ಹೊರಗಿನ ಶಿಕ್ಷಣ ತಜ್ಞರನ್ನೂ ಆಯೋಗದಲ್ಲಿ ಸದಸ್ಯರಾಗಿ ಮಾಡಿದ್ದಾರೆ.ಕೇಂದ್ರದ ಬರ ಅಧ್ಯಯನ ತಂಡದ ಎದುರು ಬರ ಪರಿಸ್ಥಿತಿ ಬಗ್ಗೆ ಸರಿಯಾಗಿ ತಿಳಿಸಲಿಲ್ಲ.ಬರ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲ ಆಗಿದೆ ಎಂದು ಸಂಸದ ಡಿ ವಿ ಸದಾನದಗೌಡ ಅಸಾಮಾಧಾನ ಹೊರಹಾಕಿದ್ದಾರೆ.
 
ಅಲ್ಲದೇ ವಿದ್ಯುತ್ ಸಮಸ್ಯೆ ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ.ರೈತರಿಗೆ ಪರಿಹಾರ ಕೊಟ್ಟಿಲ್ಲ, ರೈತರ ಸಮಸ್ಯೆ ಆಲಿಸದೇ ಬೇಜವಾಬ್ದಾರಿ ನಡೆ ಸರ್ಕಾರ ತೋರಿಸ್ತಿದೆ.ಸರ್ಕಾರದ ಎಸ್‌ಇ‌ಪಿ ತರುವ ನಿರ್ಧಾರ ರಾಜ್ಯ ಶಿಕ್ಷಣ ವಲಯಕ್ಕೆ ಅಪಾಯಕರ ಎಂದು ಸದಾನಂದ ಗೌಡ ಹೇಳಿದ್ದು,ಸಿಡಬ್ಲ್ಯೂಆರ್‌ಸಿ ಆದೇಶ ವಿಚಾರವಾಗಿ ಕರ್ನಾಟಕದಲ್ಲಿ ನೀರಿಲ್ಲ ಬಿಡಲು ಆಗಲ್ಲ.ಆದ್ರೆ ತಮಿಳುನಾಡಿನಲ್ಲಿ ನೀರಿನ ಅವಶ್ಯಕತೆ ಎಲ್ಲಿದೆ ಅಂತ ಅವರು ಪ್ರತಿಪಾದಿಸ್ತಿಲ್ಲ.ನಮ್ಮವರು ಕುಡಿಯಲು ನೀರು ಅಗತ್ಯವಾಗಿ ಬೇಕು ಅನ್ನೋದನ್ನು ಪರಿಣಾಮಕಾರಿಯಾಗಿ ಮನವರಿಕೆ ಮಾಡಿಕೊಡುವಲ್ಲಿ ವಿಫಲ ಆಗಿದ್ದಾರೆ.ಇದು ಸರ್ಕಾರದ, ಜಲಸಂಪನ್ಮೂಲ ಖಾತೆ ಸಚಿವರ ವೈಫಲ್ಯ ಎಂದು ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೃಹಲಕ್ಷ್ಮಿ ಯೋಜನೆಗೇ ಹೆಚ್ಚು ವ್ಯಯ