Select Your Language

Notifications

webdunia
webdunia
webdunia
webdunia

ಪುತ್ತೂರು ನನ್ನ ಲೆವೆಲ್ ಅಲ್ಲ ಎಂದ ಸದಾನಂದ ಗೌಡ ವಿರುದ್ಧ ಸಿಡಿದೆದ್ದ ಕರಾವಳಿ ಜನ

DV Sadananda Gowda
ಮಂಗಳೂರು: ನಾನು ಸಿಎಂ ಆಗಿದ್ದವನು, ಪುತ್ತೂರು ಎಲ್ಲಾ ನನ್ನ ಲೆವೆಲ್ ಅಲ್ಲ ಎಂದ ಮಾಜಿ ಸಿಎಂ, ಡಿವಿ ಸದಾನಂದ ಗೌಡ ಹೇಳಿಕೆಗೆ ಈಗ ಕರಾವಳಿ ಜನ ತಿರುಗಿಬಿದ್ದಿದ್ದಾರೆ.

ಪುತ್ತೂರಿನ ಖಾಸಗಿ ಶಾಲೆಯ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಡಿವಿ ಸದಾನಂದ ಗೌಡಗೆ ಪತ್ರಿಕರ್ತರು ಪುತ್ತೂರು ಬಿಜೆಪಿಯ ಶುದ್ಧೀಕರಣದ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದಕಕ್ಎ ಉತ್ತರಿಸಿದ ಅವರು ನನ್ನ ಲೆವೆಲ್ ದು ಅಲ್ಲ. ನಂಗಿಂತ ಸಣ್ಣ ಲೆವೆಲ್ ಅದು. ನಾನು ರಾಜ್ಯದ ಸಿಎಂ, ಕೇಂದ್ರ ಸಚಿವನಾಗಿ ಕೆಲಸ ಮಾಡಿದವ. ಇನ್ನು ಆ ಲೆವೆಲ್ ಗೆಲ್ಲ ನಾನು ಬರುವವನು ಅಲ್ಲ’ ಎಂದಿದ್ದಾರೆ.

ಅವರ ಹೇಳಿಕೆ ಈಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಪುತ್ತೂರಿನಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾದವರು. ಇಲ್ಲಿಂದಲೇ ರಾಜಕೀಯದಲ್ಲಿ ಬೆಳೆದವರು. ಇದುವೇ ಅವರ ತವರೂರು. ಆದರೆ ಈಗ ಈ ಪ್ರದೇಶದ ರಾಜಕೀಯ ತಮ್ಮ ಲೆವೆಲ್ ಗಲ್ಲ ಎಂದು ಹೇಳುವ ಧಿಮಾಕು ಬಂದಿದೆ. ಬೆಳೆದ ಊರನ್ನೇ ಸಣ್ಣ ಮಟ್ಟ ಎಂದು ಕರೆದಿರುವುದಕ್ಕೆ ಇಲ್ಲಿನ ಜನ ಅವರ ಮೇಲೆ ಈಗ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸುತ್ತಿದ್ದಾರೆ.

 
ಪುತ್ತೂರಿನ ಜನರ ಬೆಂಬಲದಿಂದಲೇ ಬೆಳೆದು ಇಂದು ಈ ರೀತಿಯ ಹೇಳಿಕೆ ನೀಡಿರುವುದು ನೋಡಿದರೆ ಅವರು ಹತ್ತಿದ ಏಣಿಯನ್ನು ಮರೆತಂತಿದೆ ಎಂದು ಹಲವರು ಟೀಕಿಸಿದ್ದಾರೆ.  ಮಾತು ಆಡಿದರೆ ಹೋಯ್ತು ಎನ್ನುವುದು ಸದಾನಂದ ಗೌಡ ಪಾಲಿಗೆ ನಿಜವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸಲು ಬಿಜೆಪಿ ಒಪ್ಪಿಲ್ಲ ಅಂದ್ರೆ ಎಂಥಾ ಅವಮಾನ