Select Your Language

Notifications

webdunia
webdunia
webdunia
webdunia

ಮೊಬೈಲ್ ಪೋನ್‌ನಿಂದಾಗಿ ರಾತ್ರಿ ನಿದ್ದೆಯೇ ಬರುತ್ತಿರಲಿಲ್ಲ: ಸಿಎಂ

ಮೊಬೈಲ್ ಪೋನ್‌ನಿಂದಾಗಿ ರಾತ್ರಿ ನಿದ್ದೆಯೇ ಬರುತ್ತಿರಲಿಲ್ಲ: ಸಿಎಂ
ಬೆಂಗಳೂರು , ಬುಧವಾರ, 28 ಡಿಸೆಂಬರ್ 2016 (12:29 IST)
ಮೊಬೈಲ್ ಪೋನ್‌ನಿಂದಾಗಿ ರಾತ್ರಿ ನನಗೆ ನಿದ್ದೆಯೇ ಬರುತ್ತಿರಲಿಲ್ಲ. ಹೀಗಾಗಿ ಮೊಬೈಲ್ ಪೋನ್ ಇಟ್ಟುಕೊಳ್ಳುವುದನ್ನೆ ಬಿಟ್ಟು ಬಿಟ್ಟೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 
ಬಿಬಿಎಂಪಿಯ ನಾಗರಿಕ ಸೇವೆಗಳ ಸರಳೀಕರಣ, ಇ-ಆಡಳಿತದ ಉಪಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ನನ್ನ ಹತ್ತಿರ ಒಂದು ಮೊಬೈಲ್ ಪೋನ್ ಇತ್ತು. ಆ ಪೋನ್‌ನ್ನು ಮೂರು ತಿಂಗಳು ಮಾತ್ರ ಬಳಸಿದ್ದೆ. ರಾತ್ರಿಯೂ ಸಹ ಹತ್ತಾರು ಕರೆಗಳು ಬರುತ್ತಿತ್ತು. ಇಂತಹ ರಗಳೆಯೇ ಬೇಡ ಎಂದು ಮೊಬೈಲ್ ಪೋನ್ ಇಟ್ಟುಕೊಳ್ಳುವುದನ್ನೆ ಬಿಟ್ಟು ಬಿಟ್ಟೆ. ಆದರೆ, ಈಗ ಎಲ್ಲರೂ ಡಿಜಿಟಲ್ ಇಂಡಿಯಾ ಬಗ್ಗೆ ಹೇಳುತ್ತಿದ್ದಾರೆ. ನನ್ನ ಬಳಿ ಮೊಬೈಲ್ ಪೋನ್ ಇಲ್ಲ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಅವರಿಗೆ ಟಾಂಗ್ ನೀಡಿದರು. 
 
ಕಾರ್ಯಕ್ರಮ ಉದ್ದೇಶಿಸಿ ಇದಕ್ಕೂ ಮುಂಚೆ ಮಾತನಾಡಿದ್ದ ಕೇಂದ್ರ ಸಚಿವ ಅನಂತ್ ಕುಮಾರ್, ದೇಶದಲ್ಲಿ 20 ವರ್ಷಗಳ ಅಂತರದಲ್ಲಿ ಮೂರು ಕ್ರಾಂತಿಗಳು ನಡೆದಿವೆ. ಅದರಲ್ಲಿ ಮೊಬೈಲ್ ಕ್ರಾಂತಿಯೂ ಒಂದು. ದೇಶದಲ್ಲಿ ಪ್ರಸ್ತುತ 120 ಕೋಟಿ ಮೊಬೈಲ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿ.ಎಸ್. ಯಡಿಯೂರಪ್ಪ ಕಂಸ ಇದ್ದಂತೆ: ಈಶ್ವರಪ್ಪ ಕಿಡಿ