Publish Date: Fri, 02 Sep 2022 (15:50 IST)
Updated Date: Fri, 02 Sep 2022 (17:54 IST)
ಮದುಮಗಳು ಮದುವೆಯ ನಂತರ ಖುಷಿಗೆ ಕಂಠಪೂರ್ತಿ ಕುಡಿದು ರಿಸೆಪ್ಷನ್ ಮುಗಿಯುವವರೆಗೂ ಮಲಗೇ ಇದ್ದಳಂತೆ.
ಪಾಪ ಮದುಮಗ ಒಬ್ಬನೇ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಬೇಕಾದ ಅನಿವಾರ್ಯ ಉಂಟಾಯಿತಂತೆ. ಈ ಘಟನೆಯ ಬಗ್ಗೆ ಮದುವೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಆ ಪೋಸ್ಟ್ ಈಗ ವೈರಲ್ ಆಗಿದೆ.
"ನಾನು ಇತ್ತೀಚೆಗೆ ಮದುವೆ ಸಮಾರಂಭವೊಂದಕ್ಕೆ ಹೋಗಿದ್ದೆ. ಸಂಜೆ ಆರು ಗಂಟೆಗೆಲ್ಲಾ ರಿಸೆಪ್ಷನ್ ಆರಂಭವಾಯಿತು. ಗಂಡು ಹೆಣ್ಣು ಇಬ್ಬರೂ ಬಂದರು. ಅಧಿಕೃತವಾದ ಭಾಷಣ ಮತ್ತುಳಿದ ಕಾರ್ಯಕ್ರಮ ಕ್ಷಣದೊಳಗೆ ಮುಗಿದುಹೋಯಿತು. ಯಾಕೆ ಇಷ್ಟೊಂದು ತುರ್ತಾಗಿ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ನನ್ನನ್ನು ಕಾಡಿತ್ತು. ಆದರೆ ಮದುಮಗಳ ಪರಿಸ್ಥಿತಿಯನ್ನು ನೋಡಿ ಅರ್ಥವಾಗಿತ್ತು. ಆಕೆ ಸಂಪೂರ್ಣವಾಗಿ ಕುಡಿದಿದ್ದಳು. ಏನು ಮಾಡುತ್ತಿದ್ದಾಳೆ ಎಂಬ ಪರಿಭ್ರಮೆಯೂ ಆಕೆಗಿರಲಿಲ್ಲ," ಎಂದು ಮದುವೆಯ ಬಗ್ಗೆ ಸಂಬಂಧಿ ಬರೆದುಕೊಂಡಿದ್ದಾರೆ.
ಸಂಜೆ ಎಂಟುಗಂಟೆಗೆಲ್ಲಾ ಮದುಮಗಳು ನಿಲ್ಲಲೂ ಶಕ್ತಿಯಿಲ್ಲದೇ ಮಲಗಿಬಿಟ್ಟಳು. ನಂತರ ರಿಸೆಪ್ಷನ್ ಹೊರಬದಿಯ ಸೋಫಾ ಒಂದರ ಮೇಲೆ ಮಲಗಿದವಳು ರಿಸೆಪ್ಷನ್ ಮುಗಿದರೂ ಏಳಲಿಲ್ಲವಂತೆ. ಮದುವೆಗೆ ಬಂದವರೆಲ್ಲಾ ಮದುಮಗಳ ಸ್ಥಿತಿ ನೋಡಿ ಆಳಿಗೊಂದು ಮಾತು ಉದುರಿಸಿ ಹೋದರಂತೆ.