Publish Date: Wed, 07 Jun 2023 (14:01 IST)
Updated Date: Wed, 07 Jun 2023 (14:13 IST)
ಕುಡಿದ ಮತ್ತಿನಲ್ಲಿ ವಾಟರ್ ಟ್ಯಾಂಕರ್ ಚಾಲನೆ ಮಾಡಿದ ಪರಿಣಾಮ ಟ್ಯಾಂಕರ್ ಹರಿದು ಬಾಲಕ ಸಾವನಾಪ್ಪಿದ್ದಾನೆ.ವಾಟರ್ ಟ್ಯಾಂಕರ್ ಗಳ ಆರ್ಭಟಕ್ಕೆ ಇದೀಗ ಮತ್ತೊಂದು ಜೀವ ಬಲಿಯಾಗಿದೆ. ಬಾಲಕ ಭುವನ್(4) ಸಿ ಕೆ ಪಾಳ್ಯದ ನಿವಾಸಿ ಸಾವಾನಾಪ್ಪಿರುವ ಘಟನೆ ಬನ್ನೇರುಘಟ್ಟ ಸಮೀಪದ ಸಿ ಕೆ ಪಾಳ್ಯದಲ್ಲಿ ನಡೆದಿದೆ.ಅಣ್ಣನ ಜೊತೆ ಬೇಕರಿಯಲ್ಲಿ ಐಸ್ ಕ್ರೀಮ್ ತೆಗೆದುಕೊಂಡು ಬರುವಾಗ ಅಪಘಾತ ಸಂಭವಿಸಿದೆ.ವಾಟರ್ ಟ್ಯಾಂಕರ್ ಅನ್ನು ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಅಪಘಾತದ ದೃಶ್ಯ ನೋಡಿದರೆ ಎಂಥವರಿಗೂ ಎದೆ ಜೆಲ್ಲೆ ಅನಿಸುತ್ತೆ.ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಳ್ಳಿಗ್ಗೆ 9-30 ರಲ್ಲಿ ನೆಡೆದ ದುರ್ಘಟನೆ ನಡೆದಿದೆ.ತಕ್ಷಣ ಬಾಲಕನನ್ನು ಪೋಷಕರು ಆಸ್ಪತ್ರೆಗೆ ಸೇರಿಸಿದ್ದಾರೆ.ಆದ್ರೆ ಆಸ್ಪತ್ರಗೆ ಸೇರಿಸುವ ಮುನ್ನವೇ ಬಾಲಕ ಮೃತಪಟ್ಟಿದ್ದಾನೆ.ಇನ್ನೇನು ಎರಡು ದಿನದಲ್ಲಿ ಶಾಲೆಗೆ ಬಾಲಕ ಹೋಗಬೇಕಿದ್ದು,ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.ಟಿ. ಚಿನ್ನಣ್ಣ ಅನ್ನುವವರಿಗೆ ಸ ನೀರಿನ ಟ್ರ್ಯಾಕ್ಟರ್ ಸೇರಿದ್ದು,ಗುಲಬರ್ಗ ಮೂಲದ ಚಂದ್ರು ಟ್ರ್ಯಾಕ್ಟರ್ ಚಾಲಕ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.